ಕೊರೋನಾದಿಂದ ಪೋಷಕರನ್ನ ಕಳೆದುಕೊಂಡ ಮಕ್ಕಳಿಗೆ ಸ್ಕಾಲರ್ ಶಿಪ್: ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಗೆ ಪ್ರಧಾನಿ ಮೋದಿ ಚಾಲನೆ.

kannada t-shirts

 

ನವದೆಹಲಿ,ಮೇ,30,2022(www.juskannada.in): ಕೊರೋನಾದಿಂದ ಪೋಷಕರನ್ನ ಕಳೆದುಕೊಂಡ ಮಕ್ಕಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್  ಯೋಜನೆಯನ್ನ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

ಈ ಕುರಿತು ಮಾತನಾಡಿದ ಪ್ರಧಾನಿ ಮೋದಿ,  ಕೊರೋನಾದಿಂಧ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡ ಜನರಿಗೆ ಪರಿಸ್ಥಿತಿ ಎಷ್ಟು ಕಷ್ಟಕರವಾಗಿದೆ ಎಂದು ನನಗೆ ತಿಳಿದಿದೆ. ಕೋವಿಡ್ ಸಮಯದಲ್ಲಿ ತಮ್ಮ ಪೋಷಕರನ್ನ ಕಳೆದುಕೊಂಡ ಮಕ್ಕಳಿಗಾಗಿ ಈ ಕಾರ್ಯಕ್ರಮ ಜಾರಿ ಮಾಡಲಾಗುತ್ತಿದೆ. ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆ ಅಂತಹ ಮಕ್ಕಳಿಗೆ ಮಾಡುವ ಪ್ರಯತ್ನವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು.

ಪೋಷಕರನ್ನ ಕಳೆದುಕೊಂಡ ಮಕ್ಕಳಿಗೆ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆ ಮೂಲಕ  ಫಲಾನುಭವಿ ಮಕ್ಕಳ ಖಾತೆಗೆ ಸಹಾಯಧನ ಹಾಕಲಾಗುತ್ತದೆ  ಯಾರಿಗಾದರೂ ವೃತ್ತಿಪರ ಕೋರ್ಸ್ ಗಳಿಗೆ, ಉನ್ನತ ಶಿಕ್ಷಣಕ್ಕಾಗಿ ಶಿಕ್ಷಣ ಸಾಲದ ಅಗತ್ಯವಿದ್ದರೆ, ಪಿಎಂ-ಕೇರ್ಸ್ ಸಹಾಯ ಮಾಡುತ್ತದೆ . ಇತರ ದೈನಂದಿನ ಅಗತ್ಯಗಳಿಗಾಗಿ ಇತರ ಯೋಜನೆಗಳ ಮೂಲಕ ಮಾಸಿಕವಾಗಿ ಅವರಿಗೆ 4,000 ರೂ . ಸಹಾಯದನ ನೀಡಲಾಗುತ್ತದೆ ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿದರು.  ಜತೆಗೆ ಪೋಷಕರನ್ನ ಮಕ್ಕಳಿಗೆ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆ ಮೂಲಕ  ಆಯುಸ್ಮಾನ್ ಹೆಲ್ತ ಕಾರ್ಡ್ ನೀಡಲಾಗುತ್ತದೆ ಎಂದು ತಿಳಿಸಿದರು.

Key words: Scholarship – parents-deprived -children – Corona- PM Modi

website developers in mysore