ಶನಿವಾರದ ರಜೆ ಆದೇಶ ಶಿಕ್ಷಕರಿಗೆ ಅನ್ವಯಿಸಲ್ಲ: ಡಿಡಿಪಿಐ ಪಾಂಡುರಂಗ ಸ್ಪಷ್ಟನೆ…

ಮೈಸೂರು, ಜುಲೈ 10,2020(www.justkannada.in): ರಾಜ್ಯದಲ್ಲಿ ಮಹಾಮಾರಿ ಕೊರೋನಾ ಹೆಚ್ಚಳ ಹಿನ್ನೆಲೆ,  ಸರ್ಕಾರಿ ನೌಕರರಿಗೆ ಶನಿವಾರ ರಜೆ ನೀಡಿರುವ ಆದೇಶ ಶಿಕ್ಷಕರಿಗೆ ಅನ್ವಯಿಸಲ್ಲ ಎಂದು ಡಿಡಿಪಿಐ ಪಾಂಡುರಂಗ ಸ್ಪಷ್ಟನೆ ನೀಡಿದ್ದಾರೆ.jk-logo-justkannada-logo

ಸೋಮವಾರದಿಂದ ಎಸ್ಎಸ್ ಎಲ್ಸಿ ಪರೀಕ್ಷೆ ಮೌಲ್ಯಮಾಪನ ಆರಂಭವಾಗಲಿದೆ. ಹೀಗಾಗಿ ಎಸ್ಎಸ್ಎಲ್ಸಿ ಮೌಲ್ಯಮಾಪನಕ್ಕೆ ಶಿಕ್ಷಕರು ಕಡ್ಡಾಯವಾಗಿ ಬರಬೇಕು. ಆರು ದಿನಗಳ ಕಾಲ ಎಸ್ಎಸ್ಎಲ್ಸಿ ಮೌಲ್ಯಮಾಪನ ನಡೆಯಲಿದೆ. ಮೌಲ್ಯಮಾಪನ ಪ್ರಾರಂಭವಾದ ಬಳಿಕ ಮುಗಿಯುವವರೆಗೂ ಯಾವ ಶಿಕ್ಷಕರಿಗೂ ರಜೆ ಇಲ್ಲ ಎಂದು ಡಿಡಿಪಿಐ ಪಾಂಡುರಂಗ ತಿಳಿಸಿದ್ದಾರೆ.

ಕೊರೊನಾದಿಂದ ಎಸ್ಎಸ್ಎಲ್ಸಿ ಪರೀಕ್ಷೆ ತಡವಾಗಿ ನಡೆದಿದೆ. ಕೊರೊನಾ ಆಂತಕದಲ್ಲೂ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ. ಆದ್ದರಿಂದ ತ್ವರಿತವಾಗಿ ಮೌಲ್ಯಮಾಪನ ಮಾಡಿ ಫಲಿತಾಂಶ ಬೇಗ ನೀಡಬೇಕಿದೆ. ಹೀಗಾಗಿ ಮೌಲ್ಯಮಾಪನ ಮಾಡುವ ಶಿಕ್ಷಕರಿಗೆ ಶನಿವಾರ ರಜೆ ಇರುವುದಿಲ್ಲ. ಇನ್ನೂ ಶಾಲೆ ಪ್ರಾರಂಭವಾದ ಬಳಿಕ ಶನಿವಾರದ ರಜೆ ಬಗ್ಗೆ ಸರ್ಕಾರ ತೀರ್ಮಾನ ಮಾಡಲಿದೆ ಎಂದು ಡಿಡಿಪಿಐ ಪಾಂಡುರಂಗ ಸ್ಪಷ್ಟನೆ ನೀಡಿದರು.saturday-sunday-leave-orders-not-apply-teachers

Key words: Saturday – Sunday -leave -orders – not apply – teachers.