ಮೈಸೂರಲ್ಲಿ ನಾನಾ ಬಗೆಯ ಹಾವುಗಳಿವೆ ಎಚ್ಚರಿಕೆಯಿಂದ ಕೆಲಸ ಮಾಡಿ: ಉಸ್ತುವಾರಿ ಸಚಿವರಿಗೆ ಸಾರಾ ಮಹೇಶ್ ಸಲಹೆ!

ಮೈಸೂರು, ಜೂನ್ 07, 2020 (www.justkannada.in): ಮೈಸೂರಿನಲ್ಲಿ ಕೆರೆಹಾವು ನಾಗರಹಾವುಗಳಿವೆ ಎಚ್ಚರವಾಗಿ ಅಧಿಕಾರ ಮಾಡಿ. ಕೆಲವು ಹಾವುಗಳು ಕಡಿದ್ರೆ ವಿಷ ,ಇನ್ನ ಕೆಲವು ಮೂಸಿದ್ರೆ ವಿಷ. ಹೀಗಾಗಿ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಜಿ ಸಚಿವ ಸಾರಾ ಮಹೇಶ್ ಮನವಿ ಮಾಡಿದರು.

ಆಹಾರ ಇಲಾಖೆ ಅಧಿಕಾರಿ ಮೂಲಕ ಅಕ್ಕಿ ಯಾರ ಮನೆಗೆ ಹೋಯ್ತು ? ಈ ಕುರಿತು ತನಿಖೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಆ ಕ್ಷೇತ್ರದ ಶಾಸಕರೇ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಬಲವಂತದ ವರ್ಗಾವಣೆ ಆಗ್ತಿದೆ. ಅಬಕಾರಿ ಡಿಸಿ ವರ್ಗಾವಣೆಗೆ ನ್ಯಾಯಾಲಯ ತಡೆ ನೀಡಿದೆ. ಇದರದಲೇ ಗೊತ್ತಾಗುತ್ತೆ ಮೈಸೂರಿನಲ್ಲಿ ಯಾವ ಮಟ್ಟಕ್ಕೆ ವರ್ಗಾವಣೆ ನಡೆಯುತ್ತಿದೆ ಎಂಬುದು ಎಂದು ಸುದ್ದಿಗೋಷ್ಠಿಯಲ್ಲಿ ಶಾಸನ ಸಾರಾ ಮಹೇಶ್ ದೂರಿದರು.

ಜಂಟಿ ಸಮಿತಿ ವರದಿ:  ಚಾಮರಾಜನಗರ ಹಾಲು ಒಕ್ಕೂಟದ ಬಗ್ಗೆ ಜಂಟಿ ಸಮಿತಿ ವರದಿ ನೀಡಿದೆ. ಅಲ್ಲಿನ ಆಡಳಿತ ಮಂಡಳಿಯನ್ನ ಅಮಾನತು ಮಾಡಿ ಅಂತ ವರದಿ ನೀಡಿದೆ. ಅಲ್ಲಿನ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ಇರಲಿಲ್ಲ ಅಂತಾನು ಹೇಳಿದೆ. ಅಲ್ಲಿ ಪರೀಕ್ಷೆ ನಡೆಸಿದ ಸಂಸ್ಥೆಯೆ ಮೈಮುಲ್‌ನಲ್ಲಿ ಪರೀಕ್ಷೆ ನಡೆಸಿದೆ. ಅಲ್ಲಿಯೇ ಅಕ್ರಮ ಮಾಡಿರುವ ಸಂಸ್ಥೆಯನ್ನ ಇಲ್ಲಿ ಒಪ್ಪಲು ಸಾಧ್ಯವೇ ? ಈ ಬಗ್ಗೆ ಸೂಕ್ತ ತನಿಖೆ ಆಗಲೇ ಬೇಕು. ನಮಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ಸಾರಾ ಮಹೇಶ್ ಹೇಳಿದರು.