ಸ್ಯಾಂಟ್ರೋ ರವಿಯ ಪ್ರಾಥಮಿಕ ವಿಚಾರಣೆ: 24 ಗಂಟೆಯೊಳಗೆ ನ್ಯಾಯಾಧೀಶರ ಮುಂದೆ ಹಾಜರು- ಪೊಲೀಸ್ ಆಯುಕ್ತ ರಮೇಶ್ ಬಾನೋತ್.

kannada t-shirts

ಮೈಸೂರು,ಜನವರಿ,14,2023(www.justkannada.in):  ನಿನ್ನೆ ಗುಜರಾತ್ ನಲ್ಲಿ ಪೊಲೀಸರ ಖೆಡ್ಡಾಗೆ ಬಿದ್ದ ಸ್ಯಾಂಟ್ರೋ ರವಿಯನ್ನ ಮೈಸೂರಿಗೆ ಕರೆ ತರಲಾಗಿದ್ದು, ಮೈಸೂರಿನ‌ ವಿಜಯನಗರ ಪೊಲೀಸ್ ಠಾಣೆಯಲ್ಲಿ ಆರಂಭಿಕ ವಿಚಾರಣೆ ನಡೆಸಿದರು.

ವಿಜಯನಗರ ಪೊಲೀಸ್ ಠಾಣೆಯಲ್ಲಿ ಸ್ಯಾಂಟ್ರೋ ರವಿ ವಿರುದ್ದ ಲೈಗಿಂಕ ದೌರ್ಜನ್ಯ, ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಜಯನಗರ ಪೊಲೀಸ್ ಠಾಣೆಗೆ ಸ್ಯಾಂಟ್ರೋ ರವಿಯ ವಿಚಾರಣೆ ನಡೆಸಲಾಯಿತು.  ನಗರ ಪೊಲೀಸ್ ಆಯುಕ್ತ ರಮೇಶ್ ನೇತೃತ್ವದ ತಂಡದಿಂದ ವಿಚಾರಣೆ ನಡೆಯುತ್ತಿದ್ದು, ಆರಂಭಿಕ ವಿಚಾರಣೆ ನಂತರ ಸ್ಯಾಂಟ್ರೋ ರವಿಗೆ ವೈದ್ಯಕೀಯ ಪರೀಕ್ಷೆಗೆ  ನಡೆಸಲಾಗಿದ್ದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಇನ್ನು ಪೊಲೀಸ್ ಠಾಣೆ ಸುತ್ತ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದೆ.

ಈ ಕುರತು ಮಾತನಾಡಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್,  ಸ್ಯಾಂಟ್ರೋ ರವಿಯ ಪ್ರಾಥಮಿಕ ವಿಚಾರಣೆ ನಡೆಯುತ್ತಿದೆ. ಕೇಸಿನ ಪ್ರಾಥಮಿಕ ಪ್ರಶ್ನೆಗಳಿಗೆ ಉತ್ತರ ಪಡೆಯುತ್ತಿದ್ದೇವೆ. ಆರೋಪಿ ಬಂಧನ ನಂತರ ಪ್ರಯಾಣದ ಅವಧಿ ಬಿಟ್ಟು 24 ಗಂಟೆ ಒಳಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಬೇಕು. ಇವತ್ತು ಬೆಳಿಗ್ಗೆಯಿಂದ 24 ಗಂಟೆ ಒಳಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುತ್ತೇವೆ ಎಂದರು.

Key words: Santro Ravi- preliminary –hearing- Police Commissioner -Ramesh Banoth.

website developers in mysore