ಸ್ಯಾಂಟ್ರೋ ರವಿ ಪ್ರಕರಣ ಹೈಕೋರ್ಟ್ ಸಿಜೆ ನೇತೃತ್ವದಲ್ಲಿ ತನಿಖೆಯಾಗಲಿ- ಹೆಚ್.ಡಿಕೆ ಆಗ್ರಹ.

ಕಲ್ಬುರ್ಗಿ,ಜನವರಿ,9,2023(www.justkannada.in): ಸ್ಯಾಂಟ್ರೋ ರವಿ ಪ್ರಕರಣ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯಾಗಲಿ ಎಂದು ಮಾಜಿ ಸಿಎಂ  ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದರು.

ಕಲ್ಬುರ್ಗಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಎಚ್ ಡಿಕೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ನಾನು ಯಾವ ಇಲ್ಲಸಲ್ಲದ ಆರೋಪ ಮಾಡಿದ್ದೇನೆ. ಸ್ಯಾಂಟ್ರೋ ರವಿ ಮಂತ್ರಿಗಳ ಜತೆ ಇರುವ ಫೋಟೊ ಸಿಕ್ಕಿದೆ. ಈ ಫೋಟೊವನ್ನ ನಾನು ಬಿಡುಗಡೆ ಮಾಡಿದ್ದಲ್ಲ ಸಾರ್ವಜನಿಕವಾಗಿ ಹರಿದಾಡುತ್ತಿದೆ.  ರವಿ ಸರ್ಕಾರ ಆಡಳಿತದಲ್ಲಿ ಶಾಮೀಲಾಗಿದ್ದಾನೆ.  ನಾನು ಗೃಹಸಚಿವರ ತೆಜೋವಧೆ ಮಾಡಲು ಮಾತನಾಡುತ್ತಿಲ್ಲ. ಪೊಲೀಸರೇ ಆತನೊಂದಿಗೆ ವ್ಯವಹಾರ ಮಾಡಿದ್ದಾರೆ ಅಂತಹ ಪೊಲೀಸರಿಂದ ತನಿಖೆ ಹೇಗೆ ಸಾಧ್ಯ..? ಹೈಕೋರ್ಟ್ ಸುಪರ್ದಿಯಲ್ಲಿ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.

ಬಿಜೆಪಿ ನಾಯಕರು ಭಯೋತ್ಪಾದನೆ ಬಗ್ಗೆ ಮಾತನಾಡುತ್ತಾರೆ. ಆದರೇ ರವಿ ಪ್ರಕರಣ  ಅದಕ್ಕಿಂತ ಟೆರರಿಸಂ. ಸಮಾಜಘಾತಕ ಕೃತ್ಯಗಳು ಸಮಾಜವನ್ನೇ ಬಲಿ ತೆಗೆದುಕೊಳ್ಳುತ್ತದೆ ಎಂದು ಕಿಡಿಕಾರಿದರು.

ಬಿಜೆಪಿಯಿಂದ ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ,  ಕಾಂಗ್ರೆಸ್- ಬಿಜೆಪಿ ಯಾವ ಕನಸಾದ್ರೂ ಬಿಡುಗಡೆ ಮಾಡಲಿ ನನಗೆ ಜನರ ಕನಸು ನನಸು ಮಾಡುವುದು ಮುಖ್ಯ ಎಂದರು.

Key words: Santro Ravi- case – investigate- High Court -CJ- HD Kumaraswamy