ಅಧಿಕೃತವಾಗಿ ಕೆಜಿಎಫ್’ಗೆ ಎಂಟ್ರಿ ಕೊಟ್ಟ ಅಧೀರ !

kannada t-shirts

ಬೆಂಗಳೂರು, ಸೆಪ್ಟೆಂಬರ್ 26, 2019 (www.justkannada.in): ಬಹು ನಿರೀಕ್ಷಿತ ಚಿತ್ರ ಕೆಜಿಎಫ್ 2ಗೆ ಈಗಾಗಲೆ ಮೈಸೂರು, ಬೆಂಗಳೂರಲ್ಲಿ ಬೃಹತ್ ಸೆಟ್ ನಿರ್ಮಾಣ ಮಾಡಲಾಗಿದೆ.

ಇದೀಗ ಚಿತ್ರೀಕರಣ ಸೆಟ್​​ಗೆ ನಟ ಸಂಜು ಬಾಬಾ ಎಂಟ್ರಿ ಕೊಟ್ಟಿದ್ದಾರೆ. ಈ ಬಗ್ಗೆ ಸ್ವತಃ ಚಿತ್ರತಂಡವೇ ಅಧೀರನ ಜೊತೆ ಒಂದು ಫೋಟೋ ಕ್ಲಿಕ್ಕಿಸಿ ಅಧಿಕೃತವಾಗಿ ಕನ್ಫರ್ಮ್ ಮಾಡಿದೆ.

ಸದ್ಯ ಕೆಜಿಎಫ್ ಚಾಪ್ಟರ್-2 ಸಿನಿಮಾ ಹೈದ್ರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಆದ್ರೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸೆಟ್​​ಗಳ ಕೆಲಸಗಳು ನಡೆಯುತ್ತಿದ್ದು ಆಂಧ್ರದ ಒಂದು ಭಾಗದಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಮಾಡಲಾಗುತ್ತಿದೆ.

website developers in mysore