ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಸಾನಿಯಾ ಮಿರ್ಜಾ ಸಹೋದರಿ-ಮೊಹಮ್ಮದ್‌ ಅಜರುದ್ದೀನ್‌ ಪುತ್ರ

ಬೆಂಗಳೂರು, ಅಕ್ಟೋಬರ್, 2019 (www.justkannada.in): ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಸಹೋದರಿ ಅನಮ್‌ ಮಿರ್ಜಾ ಹಾಗೂ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮೊಹಮ್ಮದ್‌ ಅಜರುದ್ದೀನ್‌ ಪುತ್ರ ಅಸದುದ್ದೀನ್‌ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಈಗ ಸ್ವತಃ ಸಾನಿಯಾ ಮಿರ್ಜಾ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಈ ಇಬ್ಬರೂ ಡಿಸೆಂಬರ್‌ನಲ್ಲಿ ವಿವಾಹವಾಗಲಿದ್ದಾರೆ.

ಫಿಕ್ಸಿಂಗ್ ಪ್ರಕರಣದ ಬಳಿಕ ಮೊಹಮ್ಮದ್‌ ಅಜರುದ್ದೀನ್‌ ಕಳೆಗುಂದಿದ್ದಾರೆ. ಈಗ ಅವರ ಪುತ್ರ ಸಾನಿಯಾ ಸಹೋದರಿ ಕೈಹಿಡಿಯುತ್ತಿದ್ದಾರೆ.