ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿದ ನಟ ಅರ್ಜುನ್ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್

ಬೆಂಗಳೂರು:ಜುಲೈ-4:(www.justkannada.in) ಬಾಟಲ್ ಕ್ಯಾಪ್ ಚಾಲೆಂಜ್ ಎಂಬ ವಿಶಿಷ್ಠ ಸವಾಲೊಂದು ಈಗ ಸಾಮಾಜಿಕ ಜಾಲತಾಣಗಲ್ಲಿ ಭಾರೀ ಗಮನಸೆಳೆಯುತ್ತಿದೆ. ಹಾಲಿವುಡ್ ನಟನಿಂದ ಆರಂಭವಾದ ಈ ಹೊಸ ಚಾಲೆಂಜ್ ಈಗ ಬಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ಹಾಗೂ ಸಾಮಾನ್ಯ ಜನರಿಂದ ಕೂಡ ಗಮನಸೆಳೆಯುತ್ತಿರುವುದು ವಿಶೇಷ.

ಹಾಲಿವುಡ್​ ನಟ ಜಾಸನ್​ ಸ್ಟಾತಮ್​ರಿಂದ ಸ್ಫೂರ್ತಿಗೊಂಡು ಬಾಲಿವುಡ್​ ಆ್ಯಕ್ಷನ್​ ಹೀರೋ ಅಕ್ಷಯ್​ ಕುಮಾರ್, ಈ ಬಾಟಲ್ ಕ್ಯಾಪ್ ಚಾಲೆಂಜ್​ ಅನ್ನು ಸ್ವೀಕರಿಸಿ, ವಿಡಿಯೋ ಮಾಡಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಬಲಿಷ್ಠ ಭಾರತಕ್ಕಾಗಿ ಈ ಕೂಡಲೇ ನೀವೆಲ್ಲಾ ಈ ಚಾಲೆಂಜ್​ ಅನ್ನು ಸ್ವೀಕರಿಸಿ ಎಂದು ಕರೆ ನೀಡಿರುವ ಅಕ್ಷಯ್, ಕಳುಹಿಸಿದ ವಿಡಿಯೋಗಳಲ್ಲಿ ತಮಗೆ ಇಷ್ಟ ಎನಿಸುವ ವಿಡಿಯೋಗಳನ್ನು ರೀಟ್ವೀಟ್​ ಹಾಗೂ ರೀ ಪೋಸ್ಟ್​ ಮಾಡುತ್ತೇನೆ ಎಂದೂ ಹೇಳಿದ್ದಾರೆ.

ಇದರ ಬೆನ್ನಲ್ಲೇ ಈ ಚಾಲೆಂಜ್​ ನ್ನು ನಟ ಅರ್ಜುನ್ ಸರ್ಜಾ ಸ್ವೀಕರಿಸಿ, ಬಾಟಲ್ ಕ್ಯಾಪ್ ಚಾಲೆಂಜ್ ಕುರಿತು ವಿಡಿಯೋ ಒಂದನ್ನು ಮಾಡಿ ಅಕ್ಷಯ್​ ಕುಮಾರ್​ ಅವರಿಗೆ ಟ್ಯಾಗ್​ ಮಾಡಿದ್ದಾರೆ. ಅಲ್ಲದೇ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಚಾಲೆಂಜ್​ ಸ್ವೀಕರಿಸಿ, ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಅಷ್ಟಕ್ಕೂ ಈ ಬಾಟಲ್ ಕ್ಯಾಪ್ ಚಾಲೆಂಜ್ ಅಂದರೆ ವ್ಯಕ್ತಿಯ ಮುಂದೆ ಒಂದು ಬಾಟಲ್​ ಅನ್ನು ಇಟ್ಟು, ಒಂಟಿ ಕಾಲಿನಲ್ಲಿ ತಿರುಗಿ ಮತ್ತೊಂದು ಕಾಲಿನಲ್ಲಿ ಕಿಕ್​ ಮಾಡಿ ಬಾಟಲಿಯ ಮುಚ್ಚಳವನ್ನು ಓಪನ್​ ಮಾಡುವುದಾಗಿದೆ.

ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿದ ನಟ ಅರ್ಜುನ್ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್

Sandalwood,Bottle cap challenge,Golden star Ganesh,Arjun sarja,Akshay-kumar,