ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪ: ಮತ್ತೊಬ್ಬ ಆರೋಪಿ ಸಿಸಿಬಿ ವಶಕ್ಕೆ…

ಬೆಂಗಳೂರು,ಸೆಪ್ಟಂಬರ್,6,2020(www.justkannada.in): ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಸಿಬಿ ಪೊಲೀಸರು ಮತ್ತೊಬ್ಬರನ್ನ ವಶಕ್ಕೆ ಪಡೆದಿದ್ದಾರೆ.jk-logo-justkannada-logo

ನಟಿ ರಾಗಿಣಿ ಆಪ್ತ ರವಿ ಶಂಕರ್ ನ ಅತ್ಯಾಪ್ತ ಪ್ರಶಾಂತ್ ರಾಂಕ ಎಂಬುವವರನ್ನ ಸಿಸಿಬಿ ವಶಕ್ಕೆ ಪಡೆದಿದೆ. ಡ್ರಗ್ಸ್ ಸೇವಿಸುತ್ತಿದ್ದವರಿಗೆ ಪೂರೈಕೆ ಮತ್ತು ನಟಿ ರಾಗಿಣಿ ಮತ್ತು ರವಿಶಂಕರ್ ಭಾಗವಹಿಸುತ್ತಿದ್ದ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ಪ್ರಶಾಂತ್ ರಾಂಕ ಎಂಬುವವರನ್ನ ವಶಕ್ಕೆ ಪಡೆದಿದ್ದಾರೆ.sandalwood-drug-dealing-another-ccb-detained

ಪ್ರಶಾಂತ್ ರಂಕಾ ರಾಜಸ್ತಾನದ ಮೂಲದವರಾಗಿದ್ದು, ಇಂದಿರಾ ನಗರದಲ್ಲಿ ವಾಸಿಸುತ್ತಿದ್ದರು. ಈ ನಡುವೆ ಪ್ರಶಾಂತ್ ರಾಂಕ ಫೈನಾಂಶಿಯಲ್ ಕಂಪನಿಯಲ್ಲಿ ಕಾರ್ ಸೀಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

Keywords: Sandalwood – drug dealing- Another -CCB -detained.