ನವೆಂಬರ್ 4ಕ್ಕೆಸಮಂತಾ ನಟನೆಯ ‘ಶಾಕುಂತಲಂ’ ರಿಲೀಸ್

Promotion

ಬೆಂಗಳೂರು, ಸೆಪ್ಟೆಂಬರ್ 24, 2022 (www.justkannada.in): ನಟಿ ಸಮಂತಾ ನಟನೆಯ ಬಹುನಿರೀಕ್ಷಿತ ಪೌರಾಣಿಕ ಕಥೆಯುಳ್ಳ ‘ಶಾಕುಂತಲಂ’ ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ.

ದಿಲ್ ರಾಜ್ ನಿರ್ಮಿಸುತ್ತಿರುವ ಸಿನಿಮಾಗೆ ನೀಲಿಮಾ ಗುಣ ಬಂಡವಾಳ ಹೂಡಿದ್ದಾರೆ. ಗುಣ ಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಪುತ್ರ ಅಲ್ಲು ಅರ್ಹ ಕಾಣಿಸಿಕೊಂಡಿದ್ದಾರೆ.

ಸಾಕಷ್ಟು ನಿರೀಕ್ಷೆ ಮೂಡಿಸಿರುವ ಶಾಕುಂತಲಂ ಸಿನಿಮಾ ನವೆಂಬರ್ 4ರಂದು ರಿಲೀಸ್ ಆಗುತ್ತಿದ್ದು ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ತೆರೆಕಾಣುತ್ತಿದೆ.

ಅಂದಹಾಗೆ ಸಿನಿಮಾದ ಫಸ್ಟ್ ಲುಕ್ ಸಾಕಷ್ಟು ಗಮನ ಸೆಳೆದಿತ್ತು. ಪೋಸ್ಟರ್ ಗೆ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ರಾಮೋಜಿ ಫಿಲ್ಮ್ ಸಿಟಿ, ಅನಂತಗಿರಿ ಬೆಟ್ಟಗಳು, ಗಾಂಧಿಪೇಟ್ ಲೇಕ್ ಈ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿದೆ.