ಬಿಡುಗಡೆಯಾದ ಮೊದಲ ದಿನವೇ ಸಲ್ಮಾನ್ ಖಾನ್ ‘ರಾಧೆ’ ಲೀಕ್

ಬೆಂಗಳೂರು, ಮೇ 14, 2021 (www.justkannada.in): ಬಿಡುಗಡೆಯಾದ ಮೊದಲ ದಿನವೇ ರಾಧೆ ಸಿನಿಮಾ ಲೀಕ್ ಆಗಿದೆ.

ಸುಲ್ತಾನ್ ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷೆಯ ರಾಧೆ ಮೊದಲ ದಿನವೇ ಲೀಕ್ ಆಗಿದೆ.

ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದಂತೆ ಅಭಿಮಾನಿಗಳು ಮುಗಿಬಿದ್ದು ವೀಕ್ಷಿಸಿದ್ದಾರೆ. ತಮಿಳು ರಾಕರ್ಸ್ ಸೇರಿದಂತೆ ಸಾಕಷ್ಟು ವೆಬ್ ಸೈಟ್ ಗಳಲ್ಲಿ ರಾಧೆ ಸಿನಿಮಾ ಸೋರಿಕೆಯಾಗಿದೆ.

ಬಿಡುಗಡೆಗೂ ಮುನ್ನವೇ ಸಲ್ಮಾನ್ ಖಾನ್ ಪೈರಸಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಆದರೂ ಲೀಕ್ ಆಗಿದೆ.