ಸುರಕ್ಷತಾ ದೃಷ್ಟಿಯಿಂದ ಬುಲೆಟ್ ಫ್ರೂ ಫ್ ಕಾರು ಖರೀದಿಸಿದ ಸಲ್ಮಾನ್ ಖಾನ್ !

Promotion

ಬೆಂಗಳೂರು, ಆಗಸ್ಟ್ 03, 2022 (www.justkannada.in): ನಟ  ಸಲ್ಮಾನ್ ಖಾನ್ ತಮ್ಮ ಸುರಕ್ಷತಾ ದೃಷ್ಟಿಯಿಂದ ಗನ್ ಲೈಸೆನ್ಸ್ ಪಡೆದಿದ್ದು, ಇದೀಗ ಬುಲೆಟ್ ಪ್ರೂಫ್ ಕಾರಿನಲ್ಲಿ ಓಡಾಡಲು ಪ್ರಾರಂಭಿಸಿದ್ದಾರೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನವರು ಸಲ್ಮಾನ್ ಖಾನ್​ಗೆ ಕೊಲೆ ಹಾಕುವ ಬೆದರಿಕೆ ಹಾಕಿದ್ದಾರೆ. 2018ರಲ್ಲಿ ಲಾರೆನ್ಸ್​​ ಗ್ಯಾಂಗ್​ನಿಂದ ಹತ್ಯೆ ಪ್ರಯತ್ನವೂ ನಡೆದಿತ್ತು.

ಜೀವ ಬೆದರಿಕೆ ಹಿನ್ನೆಲೆಯಲ್ಲಿ ಬಳಿ ಇರುವ ದುಬಾರಿ ಕಾರನ್ನು ಬುಲೆಟ್​ಪ್ರೂಫ್ ಆಗಿ ಬದಲಾಯಿಸಿದ್ದಾರೆ. ಇದೇ ಕಾರಿನಲ್ಲಿ ಅವರು ಎಲ್ಲ ಕಡೆಗಳಲ್ಲೂ ಓಡಾಡುತ್ತಿದ್ದಾರೆ ಸಲ್ಮಾನ್ ಖಾನ್.

ಸಲ್ಮಾನ್ ಖಾನ್ ಬಳಿ ಟೊಯಾಟೋ ಲ್ಯಾಂಡ್ ಕ್ರೂಸ್ ಎಸ್​ಯುವಿ ಇದೆ. ಇದರ ಎಕ್ಸ್​ ಶೋರೂಂ ಬೆಲೆ 1.50-1.80 ಕೋಟಿ ರೂಪಾಯಿ ಇದೆ. ತೆರಿಗೆಯನ್ನೂ ಸೇರಿಸಿದರೆ ಇದರ ಬೆಲೆ 2 ಕೋಟಿ ರೂಪಾಯಿ ಆಗಲಿದೆ. ಈ ಕಾರನ್ನು ಈಗ ಅವರು ಬುಲೆಟ್​ಪ್ರೂಫ್​ ಆಗಿ ಬದಲಾಯಿಸಿದ್ದಾರೆ.