ವಿಧಾನಸಭೆಯಲ್ಲಿ ಸರ್ಕಾರದ ವಿರುದ್ದವೇ ತಿರುಗಿಬಿದ್ದ ಆಡಳಿತ ಪಕ್ಷದ ಶಾಸಕ….

ಬೆಂಗಳೂರು,ಮಾ,9,2020(www.justkannada.in):  ನೆರೆ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷದ ಶಾಸಕರೇ ಆದ ಗೂಳಿಹಟ್ಟಿ ಶೇಖರ್ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ.

ಉತ್ತರ ಕರ್ನಾಟಕದಂತೆ ಮಧ್ಯ ಕರ್ನಾಟಕದಲ್ಲೂ ನೆರೆ ಹಾವಳಿ ಪ್ರವಾಹ ಬಂದು ನಷ್ಟ ಉಂಟಾಗಿದೆ. ಆದರೆ ಉತ್ತರ ಕರ್ನಾಟಕ ಭಾಗಕ್ಕೆ ಪರಿಹಾರ ನೀಡಿದಂತೆ ಮಧ್ಯ ಕರ್ನಾಟಕಕಕ್ಕೆ ನೀಡಿಲ್ಲ. ನೆರೆ ಪರಿಹಾರದಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಸರ್ಕಾರದ ವಿರುದ್ದ ಆರೋಪ ಮಾಡಿದ್ದಾರೆ.

ವಿಧಾನಸಭೆ ಕಲಾಪದಲ್ಲಿ ಇಂದು.ಹಕ್ಕಿಪಿಕ್ಕಿ ಟೆಂಟ್ ಗಳ ಫೋಟೊ ಪ್ರದರ್ಶಿಸಿ ಮಾತನಾಡಿ ಶಾಸಕ ಗೂಳೀಹಟ್ಟಿ ಶೇಖರ್, ಶಾಸಕರಾಗಿ 2 ವರ್ಷವಾಯ್ತು.  ಆದ್ರೆ  ಮನೆ ಇಲ್ಲದವರಿಗೆ ಹೊಸ ಮನೆ ನೀಡಲು ಆಗಿಲ್ಲ. ಸಚಿವರು ಅಂಕಿ ಅಂಶ ಕೊಟ್ಟರೇ ಸಾಲದು.   ಮಧ್ಯ ಕರ್ನಾಟಕವೂ ನೆರೆ ಹಾವಳಿಗೆ ತುತ್ತಾಗಿತ್ತು  ಆದರೆ ಸರ್ಕಾರ ಪರಿಹಾರ ನೀಡುವಾಗ ತಾರತಮ್ಯ ಮಾಡಿದೆ. ಉತ್ತರ ಕರ್ನಾಟಕಕ್ಕೆ ಕೊಟ್ಟಂತೆ ನೆರೆ ಪರಿಹಾರ ನೀಡಿಲ್ಲ.  ನಮ್ಮ ತಾಲ್ಲೂಕಿನಲ್ಲಿ ಸರ್ವೆ ಕಾರ್ಯ ಸರಿಯಾಗಿ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Key words:  ruling party- MLA – against – government-flood relief