ಉದ್ಯಮಗಳು, ಹೋಟೆಲ್ ಕಾರ್ಖಾನೆ, ಮಾಲ್ ಸಿಬ್ಬಂದಿಗಳಿಗೆ ಆರ್ ಟಿಪಿಸಿಆರ್ ಪರೀಕ್ಷೆ ಕಡ್ಡಾಯ….

kannada t-shirts

ಮೈಸೂರು,ಮಾರ್ಚ್,19,2021(www.justkannada.in): ಇತ್ತೀಚಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ದೊಡ್ದ ಉದ್ಯಮಗಳು, ಹೋಟೆಲ್, ಕಾರ್ಖಾನೆ, ಮಾಲ್ ಸಿಬ್ಬಂದಿಗೆ ಕೋವಿಡ್ 19 ಆರ್ಟಿಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಿ ಮೈಸೂರು ಪಾಲಿಕೆ ಆಯುಕ್ತರ ಮೂಲಕ ಮೈಸೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.jk

ಈ ಮೂಲಕ ಮೈಸೂರು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಜಿಲ್ಲಾಡಳಿತ ವತಿಯಿಂದ ಉಚಿತವಾಗಿ ಕೋವಿಡ್ 19 ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಪ್ರಕಟಣೆ ಹೊರಡಿಸಲಾಗಿದೆ.

ಈ ಕುರಿತು ಹೋಟೆಲ್ ಮಾಲೀಕರ ಸಂಘ, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ಮೈಸೂರು ಮಹಾನಗರ ಪಾಲಿಕೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.rtpcr-testing-mandatory-hotel-factories-mall-staff-mysore-district-administration

ಕೋವಿಡ್ ಪರೀಕ್ಷೆಗೆ ಪಾಲಿಕೆಗೆ ಮನವಿ ಸಲ್ಲಿಸಿದ್ದಲ್ಲಿ ಕಾರ್ಖಾನೆ, ಉದ್ಯಮ ಸ್ಥಳಗಳಿಗೆ ವೈದ್ಯರ ತಂಡವನ್ನು ರವಾನಿಸಿ ಕಾರ್ಮಿಕರಿಗೆ ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದೆ.

Key words: RTPCR -testing –mandatory- hotel –factories- mall –staff-mysore- District administration

website developers in mysore