ಲಾಕ್ ಡೌನ್ ನಿಂದ ಕೆ.ಎಸ್.ಆರ್.ಟಿ.ಸಿಗೆ 1,600 ಕೋಟಿ ರೂ.ನಷ್ಟ – ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಎಂ.ಚಂದ್ರಪ್ಪ 

ಮೈಸೂರು,ಅಕ್ಟೋಬರ್,12,2020(www.justkannada.in) : ಲಾಕ್ ಡೌನ್ ನಿಂದಾಗಿ ಒಟ್ಟಾರೆ ರಾಜ್ಯದಲ್ಲಿ ಕೆಎಸ್ ಆರ್ ಟಿಸಿಗೆ 1600 ಕೋಟಿ ರೂ.ನಷ್ಟವಾಗಿದ್ದು, ಮೈಸೂರು ವಿಭಾಗದಿಂದ 70 ಕೋಟಿ ರೂ.ನಷ್ಟವಾಗಿದೆ. ಲಾಭದ ದೃಷ್ಟಿಗಿಂತ ಸಾರ್ವಜನಿಕರ ಸೇವೆ ಅಗತ್ಯವಾಗಿದ್ದು, ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ರಾಜ್ಯ ವ್ಯಾಪಿ ಸಂಚರಿಸಲು ಪಾಸ್ ನೀಡಲಾಗುವುದು ಎಂದು ಶಾಸಕ ಹಾಗೂ ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಎಂ.ಚಂದ್ರಪ್ಪ ಹೇಳಿದರು.

jk-logo-justkannada-logo

ಮೈಸೂರು ನಗರದ ಗ್ರಾಮಾಂತರ ಕೆ.ಎಸ್.ಆರ್.ಟಿ.ಸಿ ಕಚೇರಿಯಲ್ಲಿಂದು ಮೈಸೂರು ನಗರ ಹಾಗೂ ಗ್ರಾಮಾಂತರ ವಿಭಾಗದ ಕೆ.ಎಸ್.ಆರ್.ಟಿ.ಸಿ ವಿಭಾಗದ ಅಧಿಕಾರಿಗಳ ಸಭೆಯ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಕಾರ್ಮಿಕರಿಗೆ ಉಚಿತ ಪಾಸ್ ಯೋಜನೆ ಅಧಿಕಾರಿಗಳೊಂದಿಗೆ ಚರ್ಚಿಸಿ ರಾಜ್ಯಾದ್ಯಂತ ವಿಸ್ತರಣೆ

ಪ್ರತಿ ಜಿಲ್ಲೆಯ ಕಾರ್ಮಿಕ ಇಲಾಖೆಯ ಅಧಿಕಾರಿಗಳೊಡನೆ ಸಮಾಲೋಚನೆ ನಡೆಸಿ ಇದನ್ನು ರಾಜ್ಯಾದ್ಯಂತ ವಿಸ್ತರಿಸಲಿದ್ದೇವೆ. ಕೋವಿಡ್19 ನಿಂದ ತತ್ತರಿಸಿ ಹೋಗಿದ್ದ ಕೂಲಿ ಕಾರ್ಮಿಕರಿಗೆ ನೆರವಾಗಲೆಂದು ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. ಇದರಿಂದ ಜಿಲ್ಲೆಯಿಂದ ಜಿಲ್ಲೆಗೆ ಕೂಲಿ ಕಾರ್ಮಿಕರು ಪ್ರಯಾಣ ಬೆಳೆಸಿ ತಮ್ಮ ಕೆಲಸ ಕಾರ್ಯಗಳಿಗೆ ಉಚಿತವಾಗಿ ತೆರಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.Rs 1,600-crore-Lockdown-KSRTC-KSRTC-Chairman-M.Chandrappa

ದಸರಾಗೆ  ಗ್ರಾಮಾಂತರ ವಿಭಾಗ 70 ಬಸ್ ಹಾಗೂ ನಗರ ವಿಭಾಗದಿಂದ 20 ಬಸ್ ಪೂರೈಕೆ

ಕೋವಿಡ್ 19 ಸೋಂಕಿನ ಪ್ರಯುಕ್ತ ಸರಳ ದಸರಾ ಆಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರ ಅಗತ್ಯತೆ ಅನುಸಾರವಾಗಿ ಮೈಸೂರು ಗ್ರಾಮಾಂತರ ವಿಭಾಗದ 70 ವಾಹನಗಳಿಂದ ಹಾಗೂ ಮೈಸೂರು ನಗರ ವಿಭಾಗದಿಂದ 20 ವಾಹನಗಳನ್ನು ಪೂರೈಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಖಾಸಗಿ ಬಸ್ ಗಳ ಹೆಚ್ಚಿನ ಸಂಚಾರ ನಿಯಂತ್ರಣಕ್ಕೆ ಕ್ರಮ

ಮೈಸೂರು ಜಿಲ್ಲೆಯ ಗ್ರಾಮಾಂತರ ಹಾಗೂ ನಗರ ವಿಭಾಗಗಳನ್ನು ಒಂದುಗೂಡಿಸಲಾಗುವುದು. ಖಾಸಗಿ ಬಸ್ ಗಳು ಹೆಚ್ಚಾಗಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳೊಡನೆ ಸಮಾಲೋಚನೆ ನಡೆಸಿ ಇದರ ನಿಯಂತ್ರಣಕ್ಕೆ ಮುಂದಾಗುತ್ತೇವೆ. ಕೋವಿಡ್ ನಿಂದ ಮೃತಪಟ್ಟಿರುವ ಕುಟುಂಬಗಳಿಗೆ ಸರ್ಕಾರದ ಜೊತೆ ಮಾತುಕತೆ ನಡೆಸಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

key words : Rs 1,600-crore-Lockdown-KSRTC-KSRTC-Chairman-M.Chandrappa