ಕಬ್ಬಿನ ಗದ್ಧೆಯಲ್ಲಿ ಬೆಳೆದಿದ್ಧ 13 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ…

ವಿಜಯಪುರ,ಸೆಪ್ಟಂಬರ್,12,2020(www.justkannada.in): ವಿಜಯಪುರದಲ್ಲಿ ಕಬ್ಬಿನ ಗದ್ದೆಯಲ್ಲಿ ಅಕ್ರಮವಾಗಿ ಬೆಳೆದಿದ್ದ 13 ಲಕ್ಷ ಮೌಲ್ಯದ ಗಾಂಜಾವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.jk-logo-justkannada-logo

ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಕಾಕಂಡಕಿ ಗ್ರಾಮದಲ್ಲಿ ಕಬ್ಬಿನ ಗದ್ಧೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯಲಾಗಿತ್ತು. ಮಾಹಿತಿ ತಿಳಿದು ದಾಳಿ ನಡೆಸಿದ ಪೊಲೀಸರು 13 ಲಕ್ಷ ಮೌಲ್ಯದ 130 ಕೆ.ಜಿ ಗಾಂಜಾವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಆರೋಪಿಗಳಾದ ಮಹದೇವ ನಿಜಲಗಿಮತ್ತು ಗಂಗಪ್ಪ ನಿಜಲಗಿ ಪರಾರಿಯಾಗಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.rs-13-lakh-worth-marijuana-seized

Key words: Rs 13 lakh- worth – Marijuana- seized