ಆರ್.ಆರ್ ನಗರ ಉಪ ಚುನಾವಣೆ: ಸಿಬ್ಬಂದಿ ಹಾಗೂ ಸ್ಥಳೀಯರಿಗೆ ಕೋವಿಡ್ ಟೆಸ್ಟ್- ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್…

ಬೆಂಗಳೂರು,ನವೆಂಬರ್,4,2020(www.justkannada.in): ಆರ್.ಆರ್ ನಗರ ಉಪಚುನಾವಣೆ ಮತದಾನ  ನಿನ್ನೆ ನಡೆದಿದ್ದು ನವೆಂಬರ್ 10 ರಂದು ಫಲಿತಾಂಶ ಹೊರಬೀಳಲಿದೆ. ಈ ಮಧ್ಯೆ ಚುನಾವಣಾ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿ ಹಾಗೂ ಸ್ಥಳೀಯರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.jk-logo-justkannada-logo

ಈ ಬಗ್ಗೆ ಇಂದು ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಎಲೆಕ್ಷನ್ ಪ್ರಕ್ರಿಯೆ ವೇಳೆ  ಕೋವಿಡ್ ನಿಯಮ ಉಲ್ಲಂಘನೆಯಾಗಿದೆ. ಹೀಗಾಗಿ ಆರ್.ಆರ್ ನಗರದಲ್ಲಿ ಕೋವಿಡ್ ಟೆಸ್ಟ್ ಹೆಚ್ಚಳ ಮಾಡಲಾಗುತ್ತದೆ.  ಮೊದಲು ಚುನಾವಣಾ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ನಂತರ ಸ್ಥಳೀಯರಿಗೆ ಕೋರೋನಾ ಟೆಸ್ಟ್ ಮಾಡುತ್ತೇವೆ. ನವೆಂಬರ್ 6ರಿಂದ 8 ಮತ್ತು ನವೆಂಬರ್ 11 ರಿಂದ 14ರವರೆಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.rr-nagar-by-election-covid-test-staff-locals-bbmp-commissioner-manjunath-prasad

ಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ. 678 ಮತಯಂತ್ರಗಳನ್ನ ಶಿಫ್ಟ್ ಮಾಡಲಾಗಿದೆ.  ಮತಯಂತ್ರಗಳಿಗೆ  ಮೂರು ಹಂತದಲ್ಲಿ ಭದ್ರತೆ ನಿಯೋಜಿಸಲಾಗಿದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.

Keywords: RR nagar-by Election- Covid test – staff – locals- BBMP Commissioner- Manjunath Prasad