ಮತ್ತೆ ಬ್ಯಾಟ್ ಹಿಡಿದು ಮೈದಾನಕ್ಕಿಳಿದ ರೋಹಿತ್ ಶರ್ಮಾ

ಬೆಂಗಳೂರು, ಜೂನ್ 25, 2020 (www.justkannada.in): ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಹಲವು ದಿನಗಳ ಬಳಿಕ ಮೈದಾನಕ್ಕಿಳಿದಿದ್ದಾರೆ.

ಹಲವು ದಿನಗಳ ಬಳಿಕ ತಮ್ಮ ನಿವಾಸದ ಬಳಿಯ ಮೈದಾನದಲ್ಲಿ ಕ್ರಿಕೆಟ್ ಅಭ್ಯಾಸ ಮಾಡಿದ ರೋಹಿತ್ ಶರ್ಮಾ ಆ ಖುಷಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.

ಮತ್ತೆ ಹೊಸದಾಗಿ ಕ್ರಿಕೆಟ್ ಆರಂಭಿಸಿದ ಹಾಗನಿಸುತ್ತಿದೆ ಎಂದು ರೋಹಿತ್ ಬರೆದುಕೊಂಡಿದ್ದಾರೆ. ಆದರೆ ಟೀಂ ಇಂಡಿಯಾ ಆಟಗಾರರಿಗೆ ಒಟ್ಟಾಗಿ ತರಬೇತಿ ಆರಂಭಿಸಲು ಕೊರೋನಾ ಕಾರಣದಿಂದ ಬಿಸಿಸಿಐ ಹಿಂದೇಟು ಹಾಕುತ್ತಿದೆ.

ಈ ನಡುವೆ ಒಬ್ಬರೇ ಆಟಗಾರರು ಮೈದಾನಕ್ಕಿಳಿದು ಅಭ್ಯಾಸ ಪುನಾರಂಭಿಸುತ್ತಿದ್ದಾರೆ, ಇಶಾಂತ್ ಶರ್ಮಾ ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡು ಬೌಲಿಂಗ್ ಅಭ್ಯಾಸ ಶುರು ಮಾಡಿದ್ದಾರೆ.