ರೋಹಿಣಿ ಸಿಂಧೂರಿ ಪರ ಬ್ಯಾಟ್ ಬೀಸಿ, ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟ ಸುಮಲತಾ..

ಮಂಡ್ಯ,ಜುಲೈ,10,2021(www.justkannada.in):  ಕೆಆರ್ ಎಸ್ ಡ್ಯಾಂ ಬಿರುಕು, ಅಕ್ರಮ ಗಣಿಗಾರಿಕೆ ವಿಚಾರದ ಬಗ್ಗೆ ಧ್ವನಿ ಎತ್ತಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಜೆಡಿಎಸ್ ನಾಯಕರು, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ನಡುವೆ ವಾಕ್ಸಮರ ಮುಂದುವರೆದಿದೆ.jk

ತಮಗೆ ಮೈಸೂರಿನಲ್ಲಿ ಟಾಂಗ್ ಕೊಟ್ಟಿದ್ದ ಸಂಸದ ಪ್ರತಾಪ್ ಸಿಂಹಗೆ ಸಂಸದೆ ಸುಮಲತಾ ಅಂಬರೀಶ್ ಟ್ವೀಟ್ ಮೂಲಕ ಪರೋಕ್ಷವಾಗಿ ರೋಹಿಣಿ ಸಿಂಧೂರಿ ಅವರ ಹೆಸರು ಪ್ರಸ್ತಾಪಿಸಿ  ತಿರುಗೇಟು ನೀಡಿದ್ದಾರೆ.

ರೋಹಿಣಿ ಸಿಂಧೂರಿ ಅವರ ಪರ ಪರೋಕ್ಷವಾಗಿ ಬ್ಯಾಟ್ ಬೀಸಿ ಟ್ವೀಟ್ ಮಾಡಿರುವ ಸಂಸದೆ ಸುಮಲತಾ ಅಂಬರೀಶ್,  ಸತ್ಯದ ಪರವಾಗಿ ನಿಂತಾಗ, ಬಹಳಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಕೆಲವರು ಮಹಿಳೆಯರು ಅಧಿಕಾರದಲ್ಲಿರುವುದನ್ನು ಸಹಿಸಿಕೊಳ್ಳಲಾರರು. ಭ್ರಷ್ಟರು, ನಿಷ್ಠಾವಂತ ಅಧಿಕಾರಿಗಳಿಗೆ ವರ್ಗಾವಣೆ, ಒತ್ತಡ, ಕಿರುಕುಳ ಕೊಡಬಲ್ಲರು. ಪಾಪ ಸಂಸದರನ್ನು ವರ್ಗಾವಣೆ ಮಾಡಲು ಬರುವುದಿಲ್ಲ ಎಂದು ಪ್ರತಾಪ್ ಸಿಂಹಗೆ ಟಾಂಗ್ ನೀಡಿದ್ದಾರೆ.

ಕೆಆರ್ ಎಸ್ ಡ್ಯಾಂ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪರ ಸಂಸದ ಪ್ರತಾಪ್ ಸಿಂಹ ಬ್ಯಾಟ್ ಬೀಸಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ್ಧ ಸಂಸದೆ ಸುಮಲತಾ ಅಂಬರೀಶ್, ಮೈಸೂರು ಸಂಸದ ಪ್ರತಾಪ್ ಸಿಂಹ ಕೆಲವು ಗೊಂದಲದಲ್ಲಿದ್ದಾರೆ. ಅವರು ಮೈಸೂರು ಸಂಸದರಾ? ಅಥವಾ ಮಂಡ್ಯ ಸಂಸದರಾ? ಎಂಬುದನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು  ಹೇಳಿದ್ದರು.

ಇದಕ್ಕೆ ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿ ಸಂಸದೆ ಸುಮಲತಾ ಅಂಬರೀಶ್ ಗೆ  ತಿರುಗೇಟು ನೀಡಿದ್ಧ ಸಂಸದ ಪ್ರತಾಪ್,  ನಾನು ಮೈಸೂರು –ಕೊಡಗು ಸಂಸದ ಅನ್ನೋದ್ರಲ್ಲಿ ಗೊಂದಲ ಇಲ್ಲ. ನಾನು ಮೈಸೂರಿನಲ್ಲಿ ಇರ್ತೀನಿ ಕೊಡಗಿಗೂ ಹೋಗುತ್ತೇನೆ. ಆದರೆ ವೋಟ್ ಪಡೆದು ಗೆದ್ಧವರು ಮಂಡ್ಯದಲ್ಲಿ ಇದ್ದಾರೋ ಇಲ್ವೋ ಎಂಬ ಗೊಂದಲ ಮಂಡ್ಯ ಜನತೆಗೆ ಇದೆ. ಎಂದು ವ್ಯಂಗ್ಯವಾಡಿದ್ದರು.

ENGLISH SUMMARY…

Sumalatha bats on behalf of Rohini Sindhuri and pulls MP Pratap Simha’s leg
Mandya, July 10, 2021 (www.justkannada.in): The war of words over the allegations of a crack in the KRS dam and illegal mining activities in the surroundings, between Mandya MP Sumalatha and JDS leaders, and Mysuru-Kodagu MP Pratap Simha has continued.
In a tweet, Mandya MP Sumalatha has spoken on behalf of Rohini Sindhuri indirectly, to pull the leg of Mysuru-Kodagu MP Pratap Simha.
“When MP Sumalatha Ambareesh speaks for truth many enemies will take birth. But a few people can’t even tolerate women in power. They can’t tolerate honest government officials and will bring pressure on the government and get them transferred and exploit them. But unfortunately, an MP cannot be transferred,” she said sarcastically, pointing out at Pratap Simha.
Keywords: Mandya MP Sumalatha/ Mysuru-Kodagu MP Pratap Simha/ war of words/ JDS leaders/ crack in KRS dam/ illegal mining

Key words: Rohini sinduri- -bat – Sumalatha ambarish – Pratap simha