ಮೈಸೂರು ನನ್ನ ತವರು ಮನೆ ಎನ್ನುತ್ತಲೇ ರಾಜಕಾರಣಿಗಳ ಬಣ್ಣ ಬಿಚ್ಚಿಟ್ಟ ರೋಹಿಣಿ ಸಿಂಧೂರಿ.

ಮೈಸೂರು,ಜೂನ್,7,2021(www.justkannada.in): ಮೈಸೂರಿನ ಜನ ನನ್ನನ್ನು ಮನೆ ಮಗಳಂತೆ ಕಂಡಿದ್ದಾರೆ. ತವರು ಮನೆ ಬಿಟ್ಟು ಹೋಗುವ ಭಾವನೆ ನನಗೆ ಆಗುತ್ತಿದೆ. ಮೈಸೂರಿಗೆ ಜನತೆಗೆ ನನ್ನ ಧನ್ಯವಾದಗಳು ಹೀಗೆ ಮೈಸೂರು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಅವರು ಭಾವನಾತ್ಮಕವಾಗಿ ನುಡಿದರು.jk

ಮೈಸೂರಿನಲ್ಲಿ ಇಂದು ಭೂ ಮಾಫಿಯಾ ಬಗ್ಗೆ ಮಾತನಾಡಿ  ರಾಜಕಾರಣಿಗಳ ಬಣ್ಣ ಬಿಚ್ಚಿಟ್ಟ ರೋಹಿಣಿ ಸಿಂಧೂರಿ, ನನಗೆ ಕೆಲಸ ಮಾಡಲು ಬಿಡಲಿಲ್ಲ. ಕೆಲವರು ಅನಗತ್ಯವಾಗಿ ತೊಂದರೆ ಕೊಟ್ಟರು‌. ಭೂಮಿ ಒತ್ತುವರಿ ತೆರವು ಮಾಡಲು ನಾನು ಪ್ರಯತ್ನ ಮಾಡಿದ್ದೆ. ಕೆರೆಗಳನ್ನು ಉಳಿಸೋದು, ಸರ್ಕಾರಿ ಭೂಮಿ ರಕ್ಷಣೆ ಮಾಡೋದು ನನ್ನ ಆದ್ಯತೆ ಆಗಿತ್ತು. ಆ ನಿಟ್ಟಿನಲ್ಲಿ ಮೊದಲ ದಿನದಿಂದಲೂ ಕಾರ್ಯ ನಿರ್ವಹಿಸುತ್ತಿದೆ. ಕೇರ್ಗಳ್ಳಿ ಕೆರೆಯ ಒತ್ತುವರಿ ತೆರವು ಮಾಡಿ ನೀರು ತುಂಬಿಸಲು ಪ್ರಯತ್ನಿಸಿದ್ದೆ.  ಅದರ ಜತೆಗೆ ಸರ್ವೇ ನಂ. ೪ರ 1500 ಎಕರೆ ಜಾಗ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ನಲ್ಲೂ ಒಳ್ಳೆಯ ಲಾಯರ್ ಇಟ್ಟು ಹೋರಾಟ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಕೋವಿಡ್ ನಿಯಂತ್ರಣಕ್ಕೂ ಪ್ರಾಮುಖ್ಯತೆ ಕೊಟ್ಟು ಕೆಲಸ ಮಾಡಿದ್ದೇನೆ. ವ್ಯಾಕ್ಸಿನೇಷನ್‌‌ನಲ್ಲಿ ಮೈಸೂರು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.  ಜುಲೈ ವೇಳೆಗೆ ಮೈಸೂರನ್ನು ಕರೊನಾ ಮುಕ್ತ ಅಂತ ಘೋಷಣೆ ಮಾಡಬೇಕು ಅನ್ನುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ ಎಂದು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ತಿಳಿಸಿದರು.Mysuru DC instructs officials concerned to focus more on patients with comorbidities

ಶಿಲ್ಪಾನಾಗ್ ಬಗ್ಗೆ ನನಗೆ ಅನುಕಂಪ ಇದೆ….

ಶಿಲ್ಪಾನಾಗ್  ಅವರ ಬಗ್ಗೆ ಮಾತನಾಡಿದ ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ, ಶಿಲ್ಪಾನಾಗ್ ಬಗ್ಗೆ ನನಗೆ ಅನುಕಂಪ ಇದೆ.  ಅವರ ಮಾತಲ್ಲಿ ಇನ್‌ ಸೆಕ್ಯೂರಿಟಿ ಕಾಣಿಸುತ್ತಿದೆ.ಆ ಹತಾಶೆಯಿಂದಲೇ ಅವರು ನನ್ನ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಅವರ ಬಗ್ಗೆ ನನಗೆ ಮರುಕ ಉಂಟಾಗುತ್ತಿದೆ. ಅಷ್ಟು ಮಾತ್ರ ಹೇಳ ಬಲ್ಲೆ. ಅದರಾಚೆಗೆ ನಾನು ಏನೂ ಹೇಳಲಾರೆ. ಐಎಎಸ್ ಅಧಿಕಾರಿಗಳಾದವರಿಗೆ ಪ್ರತಿಯೊಂದಕ್ಕೂ ಪ್ರೊಸೀಜರ್ ಇದೆ. ಆ ಚೌಕಟ್ಟಿನಲ್ಲೇ ನಾನು ಕೆಲಸ ಮಾಡಿದ್ದೇನೆ ಎಂದು ರೋಹಿಣಿ ಸಿಂಧೂರಿ ತಿಳಿಸಿದರು.

Key words: Rohini Sindhuri- politician-my -home -town –Mysore