ಡಿ.ರೂಪಾ ಮೌದ್ಗಿಲ್ ವಿರುದ್ದ ಕೋರ್ಟ್ ಮೆಟ್ಟಿಲೇರಿದ ರೋಹಿಣಿ  ಸಿಂಧೂರಿ: ನಿರ್ಬಂಧಕಾಜ್ಞೆ ನೀಡಲು ಮನವಿ.

ಬೆಂಗಳೂರು,ಫೆಬ್ರವರಿ,22,2023(www.justkannada.in): ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಕಿತ್ತಾಟ ಇದೀಗ ಕೋರ್ಟ್ ಮೆಟ್ಟಿಲೇರಿದೆ.

ಡಿ.ರೂಪಾ ಮೌದ್ಗಿಲ್ ವಿರುದ್ದ ನಿರ್ಬಂಧಕಾಜ್ಞೆ ನೀಡುವಂತೆ ಮನವಿ ಮಾಡಿ ರೋಹಿಣಿ ಸಿಂಧೂರಿ ಅವರು ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಖಾಸಗಿ ಫೋಟೊಗಳನ್ನ ರೂಪಾ ಫೇಸ್ ಬುಕ್ ನಲ್ಲಿ  ಪ್ರಕಟಿಸಿದ್ದಾರೆ. ನನ್ನ ಖಾಸಗಿ ಮೊಬೈಲ್ ನಂಬರ್ ಅನ್ನೂ ಬಹಿರಂಗಪಡಿಸಿದ್ದಾರೆ ಇದರಿಂದಾಗಿ ನೂರಾರು ಅಪರಿಚಿತರು ಕರೆ ಮಾಡುತ್ತಿದ್ದಾರೆ. ಡಿ. ರೂಪಾ ವೈಯಕ್ತಿಕ ತೇಜೋವಧೆ ಮಾಡುತ್ತಿದ್ದಾರೆ. ಫೇಸ್ ಬುಕ್ ನಲ್ಲಿ ಮಾನಹಾನಕಾರಿ ಹೇಳಿಕೆ ನೀಡುತ್ತಿದ್ದಾರೆ.  ಕಾನೂನಿನ ಚೌಕಟ್ಟನ್ನ ಮೀರಿ ರೂಪಾ ಹೇಳಿಕೆ ನೀಡುತ್ತಿದ್ದಾರೆ. ನನ್ನ ವಿರುದ್ದ ಸುಳ್ಳು ಆರೋಪ ಹೇಳಿಕೆ ನೀಡದಂತೆ ನಿರ್ಬಂಧಿಸಿ ಎಂದು ಕೋರ್ಟ್ ಗೆ ರೋಹಿಣಿ ಸಿಂಧೂರಿ ಮನವಿ ಮಾಡಿದ್ದಾರೆ.

ಇನ್ನೂ ರೋಹಿಣಿ ಸಿಂಧೂರಿ ಪರ ವಕೀಲರ ವಾದ ಆಲಿಸಿದ ಕೋರ್ಟ್, ನಾಳೆಗೆ ಆದೇಶವನ್ನ ಕಾಯ್ದಿರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Rohini Sindhuri – court –against- D. Rupa Maudgil-Petition