‘ರಾಕಿ ಭಾಯ್’ ಬರ್ತ್ ಡೇಗೆ ಕೆಜಿಎಫ್ ಚಾಪ್ಟರ್ 2 ಟೀಸರ್ ರಿಲೀಸ್ !

kannada t-shirts

ಬೆಂಗಳೂರು, ಡಿಸೆಂಬರ್ 20, 2019 (www.justkannada.in): ಅಭಿಮಾನಿಗಳ ಆಸೆ, ಬೇಡಿಕೆಯಂತೆ ಇದೇ ತಿಂಗಳು ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ರಿಲೀಸ್ ಆಗುತ್ತಿದೆ.

ಇದರ ಬೆನ್ನಲ್ಲೆ ಚಿತ್ರತಂಡ ಚಿತ್ರದ ಟೀಸರ್ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದೆ. ನಿರೀಕ್ಷೆಯ ಟೀಸರ್ ಮುಂದಿನ ವರ್ಷಾರಂಭದಲ್ಲಿ ಅಭಿಮಾನಿಗಳ ಮುಂದೆ ಬರುತ್ತಿದೆ ಎಂದು ಮೂಲಗಳು ತಿಳಿಸಿವೆ.

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಕೆಜಿಎಫ್-2 ಚಿತ್ರತಂಡದ ಕಡೆಯಿಂದ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ಸಿಗುತ್ತಿದೆ. ಜನವರಿ 8ಕ್ಕೆ ಯಶ್ ಹುಟ್ಟುಹಬ್ಬ ಅಂದು ಅಭಿಮಾನಿಗಳ ಮುಂದೆ ಕೆಜಿಎಫ್-2 ಚಿತ್ರದ ಟೀಸರ್ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ ಎಂದು ಮೂಲಗಳು ತಿಳಿಸಿವೆ.

website developers in mysore