ವಿನೋದ್ ಪ್ರಭಾಕರ್ ಬರ್ತ್ ಡೇಗೆ ‘ರಾಬರ್ಟ್’ ಟೀಂ ಕೊಟ್ಟ ಗಿಫ್ಟ್ !

kannada t-shirts

ಬೆಂಗಳೂರು, ಡಿಸೆಂಬರ್ 03, 2020 (www.justkannada.in): ದರ್ಶನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ರಾಬರ್ಟ್​ ಚಿತ್ರದಲ್ಲಿ ಮತ್ತೊಂದು ಪೋಸ್ಟರ್ ರಿಲೀಸ್ ಆಗಿದೆ.

ವಿನೋದ್​ ಪ್ರಭಾಕರ್​ ಪಿಸ್ತೂಲ್ ಹಿಡಿದು ನೋಟದಲ್ಲೇ ಕೆಣಕುತ್ತಿರುವ ಪೋಸ್ಟರ್ ರಗ್ಗಡ್ ಲುಕ್ ಎಲ್ಲರ ಗಮನ ಸೆಳೆದಿದೆ. ವಿನೋದ್​ ಪ್ರಭಾಕರ್​ ಅವರಿಗೆ ಇಂದು ಹುಟ್ಟುಹಬ್ಬ ಸಂಭ್ರಮ. 40ನೇ ವಸಂತಕ್ಕೆ ಕಾಲಿಟ್ಟ ವಿನೋದ್ ಅವರಿಗೆ ರಾಬರ್ಟ್ ಚಿತ್ರ ತಂಡ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಗಿಫ್ಟ್ ನೀಡಿದೆ.

ಮೊನ್ನೆಯಷ್ಟೆ ನಿರ್ದೇಶಕ ತರುಣ್​ ಸುಧೀರ್​ ಡಿ. 3ಕ್ಕೆ ನಟನ ಹುಟ್ಟುಹಬ್ಬದಂದು ರಾಬರ್ಟ್​ ಸಿನಿಮಾದಲ್ಲಿ ಅವರ ಪಾತ್ರ ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್​ ಮಾಡುವುದಾಗಿ ಟ್ವೀಟ್​ ಮಾಡುವ ಮೂಲಕ ಪ್ರಕಟಿಸಿದ್ದರು.

ಬಹಳ ಹಿಂದೆಯೇ ವಿನೋದ್​ ಪ್ರಭಾಕರ್​ ಹಾಗೂ ದರ್ಶನ್ ಅವರು ಒಟ್ಟಿಗೆ ಇರುವ ರಾಬರ್ಟ್​ ಚಿತ್ರದ ಫೋಟೋ ಒಂದು ಲೀಕ್​ ಆಗಿತ್ತು. ಆಗಲೇ ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

website developers in mysore