100 ಕೋಟಿ ಕ್ಲಬ್’ನತ್ತ ‘ರಾಬರ್ಟ್’ ದಾಪುಗಾಲು: ‘ಸೆಲೆಬ್ರೆಟಿ’ಗಳಿಗೆ ಥ್ಯಾಂಕ್ಸ್ ಎಂದ ಡಿ ಬಾಸ್!

Promotion

ಬೆಂಗಳೂರು, ಮಾರ್ಚ್ 21, 2021 (www.justkannada.in): ಅಭಿಮಾನಿಗಳ ನೆಚ್ಚಿನ ದಚ್ಚು ಡಿ ಬಾಸ್ ದರ್ಶನ್ ಅಭಿನಯದ ರಾಬರ್ಟ್ ಶೀಘ್ರ 100 ಕೋಟಿ ಕ್ಲಬ್ ಸೇರಲಿದೆ. ಹೀಗಾಗಿ ಫ್ಯಾನ್ಸ್ ಗೆ ದರ್ಶನ್ ಥ್ಯಾಂಕ್ಸ್ ಹೇಳಿದ್ದಾರೆ.

ರಾಬರ್ಟ್ ಈಗಾಗಲೇ ಎಲ್ಲ ದಾಖಲೆಗಳನ್ನು ದೂಳೀಪಟ ಮಾಡಿ ಮುನ್ನುಗ್ಗುತ್ತಿದೆ. ಇದರೊಂದಿಗೆ 100 ಕೋಟಿ ಕ್ಲಬ್ ಸೇರಿದ ಮತ್ತೊಂದು ಕನ್ನಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಸಿನಿಮಾ ಎರಡನೇ ವಾರದ ಬಳಿಕವೂ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಹಿನ್ನಲೆಯಲ್ಲಿ ದರ್ಶನ್ ಅಭಿಮಾನಿಗಳಿಗೆ ಟ್ವಿಟರ್ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.