‘ರಾಬರ್ಟ್’ ರಿಲೀಸ್ ಗೆ ಅಡ್ಡಿ:  ತೆಲುಗು ಚಿತ್ರರಂಗದ ಹೊಸನೀತಿ ವಿರುದ್ಧ ದೂರು….

kannada t-shirts

ಬೆಂಗಳೂರು,ಜನವರಿ,29,2021(www.justkannada.in):  ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ರಾಬರ್ಟ್​’ ಮಾರ್ಚ್​ 11ರಂದು ರಿಲೀಸ್ ಆಗಲಿದೆ. ಈ ಮಧ್ಯೆ  ದರ್ಶನ್ ಟಾಲಿವುಡ್ ಪ್ರವೇಶಕ್ಕೆ ವಿಘ್ನ ಉಂಟುಮಾಡುವ ಪ್ರಯತ್ನ ನಡೆದಿದೆ. ಈ ಬಗ್ಗೆ ಚಾಲೆಂಜಿಂಗ್ ಸ್ಟಾರ್ ಕಿಡಿಕಾರಿದ್ದಾರೆ.jk

ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಭಾಷೆಯಲ್ಲೂ ಈ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆದಿತ್ತು. ಆದರೆ ಆಂಧ್ರಪ್ರದೇಶದಲ್ಲಿ ರಾಬರ್ಟ್ ಚಿತ್ರ ಬಿಡುಗಡೆಗೆ ಅಡ್ಡಿಯುಂಟಾಗಿದೆ. ಇನ್ನು ತೆಲುಗು ಚಿತ್ರರಂಗದ ಹೊಸನೀತಿ ವಿರುದ್ಧ ನಿರ್ಮಾಪಕರು ಚಲನಚಿತ್ರ ವಾಣಿಜ್ಯ ಮಂಡಳಿಗೆ ಲಿಖಿತ ದೂರು ಸಲ್ಲಿಕೆ ಮಾಡಿದ್ದಾರೆ. ನಿರ್ಮಾಪಕರಿಗೆ ನಟ ದರ್ಶನ್ ಸಾಥ್ ನೀಡಿದ್ದಾರೆ.Robert- film-release-Complaint –against-Telugu –Film Chamber

ಈ ನಡುವೆ ರಾಬರ್ಟ್ ರಿಲೀಸ್ ಗೆ ಕ್ಯಾತೆ ತೆಗೆದ ಟಾಲಿವುಡ್​ ವಿರುದ್ಧ ನಟ ದರ್ಶನ್ ಗರಂ ಆಗಿದ್ದು, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶುಕ್ರವಾರ ಸಭೆ ನಡೆದು ತೆಲುಗು ಚಿತ್ರರಂಗದ ಹೊಸನೀತಿ ವಿರುದ್ಧ ದೂರು ನೀಡಲಾಗಿದೆ. ಈ ಕುರಿತು ಸಮಸ್ಯೆ ಬಗೆಹರಿಸುವುದಾಗಿ  ಫಿಲ್ಮಂ ಛೇಂಬರ್ ಅಧ್ಯಕ್ಷ ಜೈರಾಜ್ ತಿಳಿಸಿದ್ದಾರೆ.

Key words: Robert- film-release-Complaint –against-Telugu –Film Chamber

 

 

website developers in mysore