ಲಾರಿ ಅಡ್ಡಗಟ್ಟಿ ದರೋಡೆ ಮಾಡಿದ್ದ ಆರೋಪಿಗಳ ಬಂಧನ.

ಮೈಸೂರು,ಜನವರಿ,15,2022(www.justkannada.in): ಲಾರಿ ಅಡ್ಡಗಟ್ಟಿ ದರೋಡೆ ಮಾಡಿದ್ದ ಆರೋಪಿಗಳನ್ನ ಮೈಸೂರು ಪೊಲೀಸರು ಬಂಧಿಸಿದ್ದಾರೆ.

ಜನವರಿ 6 ರಂದು ಕೇರಳಾ ರಾಜ್ಯದ ಲಾರಿ ಚಾಲಕ ತುಮಕೂರಿನ ಸನ್‌ ವೀಕ್ ಕಂಪನಿಯಲ್ಲಿ ಕಬ್ಬಿಣವನ್ನು ತುಂಬಿಕೊಂಡು ಕುಣಿಗಲ್, ಮದ್ದೂರು ಮೈಸೂರು ಮಾರ್ಗವಾಗಿ ಕೇರಳಾ ರಾಜ್ಯದ ಕೂತುಪುರಂಗೆ ಬಿಳಿಕೆರೆ ಗ್ರಾಮದ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ  ರಾತ್ರಿ 10.45 ಗಂಟೆ ಸಮಯದಲ್ಲಿ ಮೈಸೂರು ಕಡೆಯಿಂದ ಒಂದು ಕಾರಿನಲ್ಲಿ ಸುಮಾರು 05 ಆಪರಿಚಿತರು ಬಂದು, ಲಾರಿಯನ್ನು ಅಡ್ಡಗಟ್ಟಿ ಲಾರಿ ಚಾಲಕನಿಗೆ ಹೊಡೆದು ಅವರ ಬಳಿಯಿದ್ದ 10,000/- ರೂ ನಗದು ಹಾಗೂ ಲಾರಿ ಕೀ ಹಾಗೂ Real me ಮೊಬೈಲ್ ಕಿತ್ತುಕೊಂಡು ಹೋಗಿದ್ದರು.  ಈ ಕುರಿತು ಲಾರಿ ಚಾಲಕ ದೂರು ನೀಡಿದ್ದರು. ಈ ಕುರಿತು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಪತ್ತೆ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.ಚೇತನ್.ಆರ್. ಸೂಚನೆಯಂತೆ ಹಾಗೂ ಅಪರ ಪೊಲೀಸ್ ಅಧೀಕ್ಷಕರಾ .ಆರ್.ಶಿವಕುಮಾರ್  ಡಿ.ಎಸ್.ಪಿ  ರವಿಪ್ರಸಾದ್ ಮಾರ್ಗದರ್ಶನದಂತೆ ಪೊಲೀಸ್ ನಿರೀಕ್ಷಕ ರವಿಕುಮಾರ್ ನೇತೃತ್ವದ ತಂಡವು ಇಬ್ಬರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಕೆ.ಎ-41-ಸಿ-5387 ಟಯೋಟೋ ಈಟಿಯೋಸ್  ಕಾರನ್ನ ವಶಕ್ಕೆ ಪಡೆದು  ಆರೋಪಿಗಳಿಂದ 2,000 ರೂ ನಗದನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Key words: robbery –mysore-arrest-two accused