ರಸ್ತೆ ತಡೆ ಚಳವಳಿ: ಮೈಸೂರಿನಲ್ಲಿ ರೈತಮುಖಂಡ ಬಡಗಲಪುರ ನಾಗೇಂದ್ರ ಸೇರಿ ನೂರಾರು ಅನ್ನದಾತರ ಬಂಧನ…

ಮೈಸೂರು,ಫೆಬ್ರವರಿ,6,2021(www.justkannada.in): ಕೇಂದ್ರ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೈಸೂರಿನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದ ರೈತ ಮುಖಂಡ ಬಡಗಲಪುರ ನಾಗೇಂಧ್ರ ಸೇರಿ ನೂರಾರು ರೈತರನ್ನ ಪೊಲೀಸರು ವಶಕ್ಕೆ ಪಡೆದರು.road-block-protest-mysore-farmers-badagalapura-nagendra-detained

ದೆಹಲಿಯ ರೈತರ ಹೋರಾಟ ಬೆಂಬಲಿಸಿ ಇಂದು ರಾಜ್ಯಾದ್ಯಂತ ರಾಷ್ಟ್ರೀಯ ಮತ್ತು ರಾಜ್ಯ ಹೆದ್ಧಾರಿ ತಡೆದು ರೈತರು ಪ್ರತಿಭಟನೆ ನಡೆಸಿದರು. ಹಾಗೆಯೇ ಮೈಸೂರಿನಲ್ಲಿ  ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ರಸ್ತೆ ತಡೆ ಚಳುವಳಿ ನಡೆಯಿತು.

ರಸ್ತೆ ಮಧ್ಯೆ ಕುಳಿತು ರೈತರು ಪ್ರತಿಭಟನೆ ನಡೆಸಿದರು. ರಸ್ತೆಯಲ್ಲಿ ರೈತರು ಅಡುಗೆ ಮಾಡಲು ಮುಂದಾದ ಹಿನ್ನೆಲೆ ಪೊಲೀಸರು‌ ಬಲವಂತವಾಗಿ ರೈತರನ್ನು ಬಂಧಿಸಿ ಬಸ್‌ ನಲ್ಲಿ ಕರೆದ್ಯೊಯ್ದರು.  ರೈತಮುಖಂಡ ಬಡಗಲಪುರ ನಾಗೇಂದ್ರ ಸೇರಿದಂತೆ ನೂರಾರು ರೈತರನ್ನ ಡಿಸಿಪಿ ಗೀತಾ ಪ್ರಸನ್ನ ಅವರ ನೇತೃತ್ವದಲ್ಲಿ ಪೊಲೀಸರು ವಶಕ್ಕೆ ಪಡೆದರು. ರೈತರನ್ನ ಬಂಧಿಸಿದ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧವೇ ರೈತರು ಧಿಕ್ಕಾರ ಕೂಗಿದರು. ರೈತರ ಬಂಧನದ ಮೂಲಕ ರಸ್ತೆ ತಡೆ ಚಳುವಳಿ ಮುಕ್ತಾಯವಾಯಿತು.

ಇನ್ನು ರೈತರ ಬಂಧನದ ವೇಳೆಯಲ್ಲಿ ರೈತರೊಬ್ಬರು ಕುತ್ತಿಗೆಗೆ ಶಾಲು ಬಿಗಿದುಕೊಂಡು ಅಸ್ವಸ್ಥರಾದ ಘಟನೆ ನಡೆಯಿತು. ನಂಜನಗೂಡಿನ ಅಳಗಂಚಿ ಗ್ರಾಮದ ನಂಜುಂಡಸ್ವಾಮಿ ಅಸ್ವಸ್ಥನಾಗಿ ಕುಸಿದು ಬಿದ್ದ  ಘಟನೆ ನಡೆಯಿತು . ಈ ವೇಳೆ ಪೊಲೀಸರು ಅಸ್ವಸ್ಥ ರೈತನಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸಿದರು.

Key words: Road block –protest-mysore-farmers- badagalapura Nagendra- detained