ಕಿಚ್ಚ ಸುದೀಪ್’ಗೆ ರಿಷಬ್ ಶೆಟ್ಟಿ ಆ್ಯಕ್ಷನ್ ಕಟ್ ?!

Promotion

ಬೆಂಗಳೂರು, ಸೆಪ್ಟೆಂಬರ್ 14, 2023 (www.justkannada.in):  ಕಿಚ್ಚ ಸುದೀಪ್ ಮುಂಬರುವ ಸಿನಿಮಾಗೆ ರಿಷಬ್ ಶೆಟ್ಟಿ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಸದ್ಯ ಸುದೀಪ್ 46ನೇ ಚಿತ್ರಕ್ಕೆ ವಿಜಯ್ ಕಾರ್ತಿಕೇಯನ್ ನಿರ್ದೇಶನ ಮಾಡುತ್ತಿದ್ದಾರೆ. ಈ ನಡುವೆ ಸುದೀಪ್ 50ನೇ ಸಿನಿಮಾಗೆ ರಿಷಬ್ ಆ್ಯಕ್ಸನ್ ಕಟ್ ಹೇಳಲಿದ್ದಾರೆ.

ಸುದೀಪ್ ಹುಟ್ಟುಹಬ್ಬದ ಬೆನ್ನಲ್ಲೇ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ರಿಷಬ್ ಶೆಟ್ಟಿ ಜೊತೆ ಕಿಚ್ಚ ಕೈಜೋಡಿಸಲಿದ್ದಾರೆ.

ರಿಷಬ್ ಹಾಗೂ ಕಿಚ್ಚ ಜೊತೆ ಈ ಬಗ್ಗೆ ಒಂದು ಸುತ್ತಿನ ಮಾತುಕತೆಯಾಗಿದೆ ಎಂದು ಹೇಳಲಾಗುತ್ತಿದೆ. ಡಿಫರೆಂಟ್ ಕಥೆ ಮತ್ತು ಲುಕ್‌ನಲ್ಲಿ ಕಿಚ್ಚನನ್ನು ತೆರೆಯ ಮೇಲೆ ತೋರಿಸುವ ಪ್ಲ್ಯಾನ್‌ನಲ್ಲಿದ್ದಾರೆ ರಿಷಬ್ ಎನ್ನಲಾಗುತ್ತಿದೆ.

ಸದ್ಯದಲ್ಲೇ ರಿಷಬ್ ಜೊತೆಗಿನ ಸಿನಿಮಾ ಅಧಿಕೃತ ಅಪ್‌ಡೇಟ್’ಗೆ ಅಭಿಮಾನಿಗಳು ಕಾಯಬೇಕಿದೆ.