ಆರ್‌.ಸಿ‌.ಇ.ಪಿ ಒಪ್ಪಂದದಿಂದ ದೇಶಕ್ಕೆ ಮಾರಕ, ಉದ್ಯೋಗ ನಾಶ: ಜನರು ಅರ್ಥೈಸಿಕೊಳ್ಳಬೇಕು- ಸಾಹಿತಿ ದೇವನೂರು ಮಹಾದೇವ ಸಲಹೆ…

ಮೈಸೂರು,ನ,12,2019(www.justkannada.in): ಆರ್ ಸಿಇಪಿ ದೇಶಕ್ಕೆ ಮಾರಕವಾಗಿದ್ದು  ಇದನ್ನು ಜನ ಅರ್ಥೈಸಿಕೊಳ್ಳಬೇಕು ಎಂದು ಸಾಹಿತಿ ದೇವನೂರು ಮಹದೇವ್ ಸಲಹೆ ನೀಡಿದರು.

ಮೈಸೂರಿನ ಮಾನಸ ಗಂಗೋತ್ರಿಯ ನಗರದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಪ್ರಜಾವಾಣಿ, ಜ್ಞಾನ ಸರೋವರ ಇಂಟರ್ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ ವತಿಯಿಂದ  ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಾಹಿತಿ ದೇವನೂರು ಮಹದೇವ್ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಾಹಿತಿ ದೇವನೂರು ಮಹದೇವ್, ಆರ್‌.ಸಿ‌ಇ.ಪಿ ಒಪ್ಪಂದದಿಂದ ಉದ್ಯೋಗ ನಾಶವಾಗುತ್ತದೆ. ಆರ್.ಸಿ.ಇ.ಪಿ ಒಪ್ಪಿಕೊಳ್ಳುವ ಜನರು ಎಚ್ಚೆತ್ತುಕೊಳ್ಳಬೇಕು. ಜನ ಸಮುದಾಯಕ್ಕೆ ತಾವು ಬೀದಿಗೆ ಬೀಳಬಾರದೆಂದು ಅರಿವಾಗಬೇಕಿದೆ. ವ್ಯಾಘ್ರನ ಗೋಮುಕವನ್ನ ಬಯಲಿಗೆಳೆಯಬೇಕಿದೆ. ಆಸೆಯೇ ದುಃಖಕ್ಕೆ ಮೂಲ ಅಂತಾ ಬುದ್ಧ ಹೇಳಿದ್ದಾರೆ. ಇವತ್ತಿನ ಜನ ಆಸೆಯ ದುಂಬಾಲು ಬಿದ್ಧಿದ್ದಾರೆ. ಆರ್ಸಿಇಪಿ ದೇಶಕ್ಕೆ ಮಾರಕ ಇದನ್ನು ಜನ ಅರ್ಥೈಸಿಕೊಳ್ಳಬೇಕು. ಯುವ ಜನತೆ ಇದರ ಹಾಗುಹೋಗುಗಳ ಬಗ್ಗೆ ಚಿಂತನೆ ನಡೆಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ  ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಚಿಂತಕರಾದ ವಿಶ್ವನಾಥ್ ಭಟ್, ಕೆ.ಪಿ.ಸುರೇಶ್, ರೆಸಿಡೆನ್ಸಿ ಸ್ಕೂಲ್ ಸಂಸ್ಥಾಪಕ ಸುಧಾಕರ್ ಶೆಟ್ಟಿ ಸೇರಿ ಇತರರು ಉಪಸ್ಥಿತರಿದ್ದರು.

Key words: RICEP contract- deadly-  Devanoor Mahadeva –Advice-mysore