ಕಂದಾಯ ಇಲಾಖೆ ಕಡತ ವಿಲೇವಾರಿ: ಉಡುಪಿ ಫಸ್ಟ್, ಮೈಸೂರಿಗೆ ದ್ವಿತೀಯ ಸ್ಥಾನ

kannada t-shirts

ಮೈಸೂರು, ಡಿಸೆಂಬರ್ 05, 2020 (www.justkannada.in): ಕಂದಾಯ ಕಡತಗಳ ವಿಲೇವಾರಿಯಲ್ಲಿ ಹಿಂದಿದ್ದ ಮೈಸೂರು ಜಿಲ್ಲೆ 2ನೇ ಸ್ಥಾನ ಪಡೆದಿದೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದೆ.

ಈ ಹಿಂದೆ ರಾಜ್ಯದಲ್ಲಿ 26ನೇ ಸ್ಥಾನದಲ್ಲಿದ್ದ ಮೈಸೂರು ಇದೀಗ 2ನೇ ಸ್ಥಾನ ಗಳಿಸಿದೆ. ಮ್ಯೂಟೇಷನ್ಸ್, ಭೂ ಪರಿವರ್ತನೆ, ಸರ್ವೇ ಮತ್ತು ಪೋಡಿ ವಿಲೇವಾರಿ, ರೆವಿನ್ಯೂ ಕೋರ್ಟ್ ಕೇಸ್ ವಿಲೇವಾರಿ, ಪಿವೈಕೆಐ ಆರ್‍’ಟಿಸಿ ತಿದ್ದುಪಡಿಯ ಆಧಾರದ ಮೇಲೆ ವಿವಿಧ ಜಿಲ್ಲೆಗಳಿಗೆ ಸ್ಥಾನ ನೀಡಲಾಗುತ್ತದೆ.

ಈ ಹಿಂದೆ ಜಿಲ್ಲೆಯು ಕಡತಗಳ ವಿಲೇವಾರಿಯಲ್ಲಿ ಸಾಕಷ್ಟು ಹಿಂದೆ ಉಳಿದಿತ್ತು. ಇದೀಗ ಕಡತಗಳು ತ್ವರಿತಗತಿಯಲ್ಲಿ ವಿಲೇವಾರಿ ಆಗುತ್ತಿದೆ. ಹೀಗಾಗಿ ನವೆಂಬರ್ ತಿಂಗಳಲ್ಲಿ ಮೈಸೂರು ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದುಕೊಳ‍್ಳಲು ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ

ಕಡತ ವಿಲೇವಾರಿಯಲ್ಲಿ ಈ ಹಿಂದಿನ ತಿಂಗಳಲ್ಲಿ ಉಡುಪಿ ಪ್ರಥಮ ಸ್ಥಾನ ಪಡೆದರೆ, ದಾವಣಗೆರೆ ದ್ವಿತೀಯ, ತುಮಕೂರು ತೃತೀಯ ಸ್ಥಾನದಲ್ಲಿ ಇತ್ತು. ನವೆಂಬರ್ ತಿಂಗಳ ವರದಿಯ ಪ್ರಕಾರ ಉಡುಪಿ ಪ್ರಥಮ, ಮೈಸೂರು ದ್ವಿತೀಯ, ದಾವಣಗೆರೆ ತೃತೀಯ ಸ್ಥಾನ ಪಡೆದಿದೆ.

website developers in mysore