ಇಂಗ್ಲೆಂಡ್ ಆಲ್ ರೌಂಡರ್ ಟಿಮ್ ಬ್ರೆಸ್ನನ್ ನಿವೃತ್ತಿ ಘೋಷಣೆ

Promotion

ಬೆಂಗಳೂರು, ಫೆಬ್ರವರಿ 02, 2022 (www.justkannada.in): ಇಂಗ್ಲೆಂಡ್‍ನ ಆಲ್ ರೌಂಡರ್ ಟಿಮ್ ಬ್ರೆಸ್ನನ್ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ.

ಈ ಬಗ್ಗೆ ಬ್ರೆಸ್ನನ್ ಮಾತನಾಡಿ, ಇದು ನನಗೆ ನಂಬಲಾಗದಷ್ಟು ಕಠಿಣ ನಿರ್ಧಾ ರವಾಗಿದೆ.

ಆದರೆ ಇದು ನನಗೆ ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

2022ರ ಋತುವಿನಲ್ಲೂ ಕ್ರಿಕೆಟ್ ಆಡಲು ನನಗೆ ಉತ್ಸಾಹವಿದೆ ಹಾಗೂ ಮನಸಿದೆ. ಆದರೆ ನನ್ನ ದೇಹಕ್ಕಿಲ್ಲ.  ನಾನು ಯಾವಾಗಲೂ ನನ್ನ ವೃತ್ತಿಜೀವನವನ್ನು ಅಪಾರ ಹೆಮ್ಮೆಯಿಂದ ಹಿಂತಿರುಗಿ ನೋಡುತ್ತೇನೆ ಎಂದಿದ್ದಾರೆ.

36 ವರ್ಷದ ಬ್ರೆಸ್ನನ್ 2006ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದರು. ಈವರೆಗೆ 23 ಟೆಸ್ಟ್ ಸೇರಿ 142 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.