ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರ ಸದನದಲ್ಲಿ ಪ್ರಸ್ತಾಪ: ಹೇಡಿಗಳು ಎಂದ ಯುಟಿ ಖಾದರ್ ವಿರುದ್ಧ ಬಿಜೆಪಿ ಶಾಸಕರಿಂದ ಆಕ್ರೋಶ.

ಬೆಂಗಳೂರು,ಮಾರ್ಚ್,23,2022(www.justkannada.in): ರಾಜ್ಯದಲ್ಲಿ ಭಾರಿ ಸುದ‍್ಧಿಯಾಗುತ್ತಿರುವ ಮುಸ್ಲೀಂ ವ್ಯಾಪಾರಿಗಳಿಗೆ ಜಾತ್ರೆಗಳಲ್ಲಿ ನಿರ್ಬಂಧ ವಿಚಾರ ಇದೀಗ ಸದನದಲ್ಲೂ ಪ್ರಸ್ತಾಪವಾಗಿದ್ದು ಗದ್ಧಲ ಉಂಟಾಗಿದೆ.

ಈ ವಿಚಾರವನ್ನ ಸದನದಲ್ಲಿ ಪ್ರಸ್ತಾಪಿಸಿ ಮಾತನಾಡಿದ ಮಾಜಿ ಸಚಿವ ಯುಟಿ ಖಾದರ್ , ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ಮಾಡದಂತೆ ಕೆಲ ಧರ್ಮದವರಿಂದ ಬ್ಯಾನರ್ ಹಾಕಲಾಗಿದೆ. ಬ್ಯಾನರ್ ಹಾಕಿದವರು ಹೇಡಿಗಳು ಕ್ರೂರಿಗಳು ಎಂದಿದ್ದಾರೆ. ಯುಟಿ ಖಾದರ್ ಹೇಳಿಕೆಗೆ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಹೇಡಿ ಎಂಬ ಪದ ವಾಪಸ್ ಪಡೆಯುವಂತೆ ಶಾಸಕ ರೇಣುಕಾಚಾರ್ಯ ಒತ್ತಾಯಿಸಿದರು.

ಮಾತು ಮುಂದುವರೆಸಿದ ಯುಟಿ ಖಾದರ್, ನಾನು ಯಾವುದೇ ಧರ್ಮದ ಹೆಸರು ಹೇಳಿಲ್ಲ ಬಿಜೆಪಿಯವರಿಗೆ ಏಕೆ ಆತಂಕ..?  ಬ್ಯಾನರ್ ಹಾಕಿದವರ ಬಗ್ಗೆ ಮಾಹಿತಿ ಪೊಲೀಸರಿಗೆ ಗೊತ್ತಿಲ್ವಾ..? ಪೊಲೀಸರು ಕ್ರಮಕೈಗೊಂಡರೇ ಸಮಸ್ಯೆ ಬಗೆ ಹರಿಯುತ್ತೆ. ಭಿತ್ತಿಪತ್ರ ಹಾಕಿದವರ ಉದ್ಧೇಶವೇನು ಅಂತ ಗೊತ್ತಾಗಬೇಕು. ಅಂಥವರ ವಿರುದ್ಧ ಕ್ರಮ ಆಗಬೇಕು. ಬ್ಯಾನರ್ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

Key words: Restrictions-Muslim traders-UT Khader -session