ನವೆಂಬರ್ 15 ರಿಂದ ಡಿಸೆಂಬರ್ 14ರವರೆಗಿನ ಕೊಂಗಳ್ಳಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ

ಚಾಮರಾಜನಗರ,ಅಕ್ಟೋಬರ್,28,2020(www.justkannada.in) :  ಕೊರೊನಾ ಭೀತಿ ಹಿನ್ನೆಲೆ ನವೆಂಬರ್ 15 ರಿಂದ ಡಿಸೆಂಬರ್ 14ರವರೆಗಿನ ಕಾರ್ತಿಕ ಮಾಸದ ಅವಧಿಯಲ್ಲಿ ಕೊಂಗಳ್ಳಿ ಬೆಟ್ಟಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.jk-logo-justkannada-logoತಮಿಳುನಾಡಿನ ತಾಳವಾಡಿ ತಾಲೂಕಿನ ಕೊಂಗಳ್ಳಿ ಬೆಟ್ಟಕ್ಕೆ ಕಾರ್ತಿಕ ಮಾಸದ ಇಡೀ 1 ತಿಂಗಳು ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ ಎಂದು ಪ್ರಧಾನ ಅರ್ಚಕ ಮಲ್ಲಿಕಾರ್ಜುನಸ್ವಾಮಿ ಮಾಹಿತಿ ನೀಡಿದ್ದಾರೆ.

ದೇಗುಲಕ್ಕೆ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ

ಜಿಲ್ಲಾ ಕೇಂದ್ರದಿಂದ 37 ಕಿ.ಮೀ ದೂರದಲ್ಲಿರುವ ದೇಗುಲಕ್ಕೆ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿ ತೆರಳಲಿದ್ದು, ಕಾರ್ತಿಕ ಮಾಸದಲ್ಲಿ ಎತ್ತಿನಗಾಡಿ ಮೂಲಕ ಬಂದು ವಿಶೇಷ ಪೂಜೆ ಪುನಸ್ಕಾರ ಕೈಗೊಳ್ಳುತ್ತಿದ್ದರು.

ಸಾಮಾಜಿಕ ಅಂತರ ಪಾಲಿಸಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕುRestriction-access-Kongli Hill-15th November-14th December

ದೇಗುಲಕ್ಕೆ ನಿರ್ಬಂಧ ಹೇರಿರುವುದಕ್ಕೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದು, ಸಾಮಾಜಿಕ ಅಂತರ ಪಾಲಿಸಿ ದೇವರ ದರ್ಶನ ಪೂಜೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.

key words : Restriction-access-Kongli Hill-15th November-14th December