‘ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರ ಜವಾಬ್ದಾರಿ’ ಕುರಿತು ನಾಳೆ ಡಾ.ಸುದರ್ಶನ ಬಲ್ಲಾಳ ಅವರೊಂದಿಗೆ ಮಾಧ್ಯಮ-ಸಂವಾದ…

ಬೆಂಗಳೂರು,ಮೇ,12,2021(www.justkannada.in): ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರ ಜವಾಬ್ದಾರಿ ಎಂಬ ವಿಷಯ ಕುರಿತು ಮಣಿಪಾಲ್ ಆಸ್ಪತ್ರೆಗಳ ಚೇರ್ಮನ್ ಡಾ.ಸುದರ್ಶನ ಬಲ್ಲಾಳ ಅವರೊಂದಿಗೆ  ಕೆಯುಡಬ್ಲ್ಯೂಜೆ ವತಿಯಿಂದ ಮಾಧ್ಯಮ-ಸಂವಾದ ಆಯೋಜಿಸಲಾಗಿದೆ.jk

ನಾಳೆ (13.05.2021) ಬೆಳಿಗ್ಗೆ 11.30ಕ್ಕೆ ಸಂವಾದ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರ ಜವಾಬ್ದಾರಿ ಕುರಿತು ಡಾ.ಸುದರ್ಶನ ಬಲ್ಲಾಳ ಅವರೊಂದಿಗೆ ಪತ್ರಕರ್ತರು ಸಂವಾದದಲ್ಲಿ ಪಾಲ್ಗೊಳ್ಳಬಹುದಾಗಿದೆ. ನಾಳೆ ನಡೆಯುವ  ಜೂಮ್ ಸಂವಾದದಲ್ಲಿ ಪತ್ರಕರ್ತರ ಆತಂಕಗಳಿಗೆ ಡಾ.ಸುದರ್ಶನ ಬಲ್ಲಾಳ ಅವರಿಂದ ಒಂದಿಷ್ಟು ಉತ್ತರ ಸಿಗಬಹುದು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.Responsibility - journalists - case –covid-Media Conversation- Dr. Sudarshan Ballal

ಕೊರೋನಾ ಸಂಕಷ್ಟದ ಇಂತಹ ಹೊತ್ತಿನಲ್ಲಿ ಕನಿಷ್ಠ ಮುಂಜಾಗ್ರತೆ ವಹಿಸುವುದು, ಮುಂದೆ ಬಂದೊದಗಬಹುದಾದ ಸನ್ನಿವೇಶವನ್ನು ಧೈರ್ಯದಿಂದ ನಿಭಾಯಿಸುವುದು ಎಲ್ಲರ ಆದ್ಯತೆಯಾಗಬೇಕಿದೆ. ಸುದ್ದಿ ಮನೆಯಲ್ಲಿ ಪತ್ರಕರ್ತರು ಮತ್ತು ಸಿಬ್ಬಂದಿಗಳು, ಅವರ ಕುಟುಂಬದ ಕ್ಷೇಮ ಕೂಡ ಬಹುಮುಖ್ಯ. ಈ ನಿಟ್ಟಿನಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ) ಪುಟ್ಟ ಹೆಜ್ಜೆ ಇಟ್ಟಿದ್ದು, ಮೊದಲ ಕಂತಿನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ಡಾ.ಸಿ.ಎನ್. ಮಂಜುನಾಥ್ ಅವರ ಜೊತೆಗೆ ಸಂವಾದ ಕಾರ್ಯಕ್ರಮ ಆಯೋಜಿಸುವ ಮೂಲಕ ಹಲವು ರೀತಿಯಲ್ಲಿ ಮಾಹಿತಿ ಪಡೆಯಲಾಗಿತ್ತು.

Key words: Responsibility – journalists – case –covid-Media Conversation- Dr. Sudarshan Ballal