ಸಚಿವ ನಾರಾಯಣಗೌಡರ ಪತ್ರಕ್ಕೆ ಸ್ಪಂದನೆ: ಸೂಕ್ತ ನಿರ್ಣಯ ತೆಗೆದುಕೊಳ್ಳುವ ಭರವಸೆ ನೀಡಿದ ಕೇಂದ್ರ ಸಚಿವ ಪಿಯುಷ್ ಗೋಯಲ್…

ಬೆಂಗಳೂರು,ಸೆ, 29,2020(www.justkannada.in): ರೋಸ್ ಓನಿಯನ್ ರಫ್ತಿಗೆ ಇರುವ ನಿರ್ಭಂದ ಸಡಿಲಿಸುವಂತೆ ತೋಟಗಾರಿಕೆ ಸಚಿವ ಡಾ| ನಾರಾಯಣ ಗೌಡ ಅವರು ಬರೆದ ಪತ್ರಕ್ಕೆ ಕೇಂದ್ರ ಸಚಿವ ಪಿಯುಷ್ ಗೋಯಲ್ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ.responding-minister-narayana-gowdas-letter-union-minister-piyush-goyal-decision

ಬೆಂಗಳೂರು ರೋಸ್ ಓನಿಯನ್ ರಫ್ತಿಗೆ ಇರುವ ನಿರ್ಭಂದ ಸಡಿಲಿಸುವಂತೆ ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಡಾ| ನಾರಾಯಣ ಗೌಡ ಕೇಂದ್ರ ಸಚಿವ ಪಿಯುಷ್ ಗೋಯಲ್ ಅವರಿಗೆ ಪತ್ರ ಬರೆದಿದ್ದರು.

ರಫ್ತಿಗೆ ಅವಕಾಶ ನೀಡದಿದ್ದಲ್ಲಿ ರೈತರಿಗೆ ಹಾಗೂ ರಫ್ತುದಾರರಿಗೆ ಸಮಸ್ಯೆ ಆಗಲಿದೆ. ಅಲ್ಲದೆ ಸ್ಥಳೀಯವಾಗಿಯು ಕೂಡ ಬೆಂಗಳೂರು ರೋಸ್ ಓನಿಯನ್‍ಗೆ ಬೇಡಿಕೆ ಇಲ್ಲ. ರಫ್ತು ಮಾಡದೆ ಇದ್ದಲ್ಲಿ ಸಾಕಷ್ಟು ನಷ್ಟ ಅನುಭವಿಸುತ್ತಾರೆ. ರೈತರ ಬದುಕು ದುಸ್ತರವಾಗುತ್ತೆ. ಹೀಗಾಗಿ ರಫ್ತಿಗೆ ಅವಕಾಶ ಕಲ್ಪಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.responding-minister-narayana-gowdas-letter-union-minister-piyush-goyal-decision

ಸಚಿವ ನಾರಾಯಣ ಗೌಡ ಅವರ ಪತ್ರಕ್ಕೆ ಉತ್ತರ ಬರೆದಿರುವ ಕೇಂದ್ರ ಸಚಿವ ಪಿಯುಷ್ ಗೋಯಲ್ ಅವರು, ತಕ್ಷಣವೇ ಇದಕ್ಕೆ ಸಂಬಂಧಿಸಿದಂತೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು. ನಿಮ್ಮ ಪತ್ರ ಬಂದ ತಕ್ಷಣ ಸಂಬಂಧಿಸಿದ ವಿಭಾಗಕ್ಕೆ ಕಳುಹಿಸಲಾಗಿದೆ. ಕೂಡಲೆ ಈ ವಿಚಾರವಾಗಿ ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ಕೇಂದ್ರ ಸಚಿವ ಪಿಯುಷ್ ಗೋಯಲ್ ಪತ್ರದಲ್ಲಿ ತಿಳಿಸಿದ್ದಾರೆ.

Key words: Responding – Minister -Narayana Gowda’s- letter-Union Minister -Piyush Goyal – decision.