ಸಚಿವ ಸ್ಥಾನದ ಆಸೆ ಅಲ್ಲ. ಹಣದ ಆಸೆಯೂ ಇಲ್ಲ ಎಂದಿದ್ರು: ಹಾಗೇದ್ರೆ ರಾಜೀನಾಮೆ ಉದ್ದೇಶವೇನು…? ಹಳ್ಳಿಹಕ್ಕಿ ವಿರುದ್ದ ಮತ್ತೆ ಕಿಡಿಕಾರಿದ ಸಚಿವ ಸಾ.ರಾ ಮಹೇಶ್….

ಬೆಂಗಳೂರು,ಜು, 23,2019(www.justkannada.in): ಸಚಿವ ಸ್ಥಾನದ ಆಸೆ ಅಲ್ಲ. ಹಣದ ಆಸೆಯೂ ಇಲ್ಲ ಎಂದಿದ್ರು ಹಾಗೇದ್ರೆ ರಾಜೀನಾಮೆ ಕೊಡುವ ಉದ್ದೇಶವೇನು ಎಂದು ಮತ್ತೆ ಅತೃಪ್ತ ಶಾಸಕ ಹೆಚ್.ವಿಶ್ವನಾಥ್ ಅವರ ವಿರುದ್ದ ಸಚಿವ ಸಾ.ರಾ ಮಹೇಶ್ ಮತ್ತೆ ಕಿಡಿಕಾರಿದರು.

ವಿಧಾನಸಭೆಯಲ್ಲಿ ಇಂದು ಮಾತನಾಡಿದ ಸಚಿವ ಸಾ.ರಾ ಮಹೇಶ್, ಸರ್ಕಾರ ರಚನೆಯಾದಾಗುಂದಲೂ ಬಿಜೆಪಿ ನಾಯಕರು ಸಮ್ಮಿಶ್ರ ಸರ್ಕಾರ ಉರುಳಿಸಲು ಪ್ರಯತ್ನಿಸಿದ್ದರು. ಈಗ ಕಾರ್ಯಾಂಗ ನ್ಯಾಯಾಂಗದ ದುರುಪಯೋಗದ ಅನುಮಾನ ಮೂಡುತ್ತಿದೆ. ಜನರಲ್ಲಿ  ಬಿಜೆಪಿ ಮೇಲೆ ಅನುಮಾನ ಹುಟ್ಟುಕೊಂಡಿದೆ. ಅತೃಪ್ತ ಶಾಸಕರು ರಾಜೀನಾಮೆ ನೀಡಿದ ನಂತರ ಜಗದೀಶ್ ಶೆಟ್ಟರ್ ಹೇಳ್ತಾರೆ ಸಮ್ಮಿಶ್ರ ಸರ್ಕಾರಕ್ಕೆ  ಅಲ್ಪಮತವಿದೆ ಎಂದು.  ಅಲ್ಲಿ ಶಾಸಕರು ಹೇಳ್ತಾರೆ ನಾವಿನ್ನು ಕಾಂಗ್ರೆಸ್ ನಲ್ಲಿದ್ದೇವೆ ಎಂದು. ಈ ನಡುವೆ ಶಾಸಕರ ರಾಜೀನಾಮೆ ಆಂಗೀಕಾರವಾಗಿಲ್ಲ. ಇಲ್ಲಿ ಯಾರ ಮಾತು ನಂಬೋದು ಎಂದು ಕಿಡಿಕಾರಿದರು.

ಇದೇ ವೇಳೆ ಹೆಚ್.ವಿಶ್ವನಾಥ್ ಅವರ ವಿರುದ್ದ ಕಿಡಿಕಾರಿದ ಸಚಿವ ಸಾ.ರಾ ಮಹೇಶ್, ಸಚಿವ ಸ್ಥಾನದ ಆಸೆ ಅಲ್ಲ. ಹಣದ ಆಸೆಯೂ ಇಲ್ಲ ಎಂದಿದ್ದರು. ಹಾಗಾದ್ರೆ ರಾಜೀನಾಮೆ ನೀಡಿದ ಉದ್ದೇಶವೇನು..? ಮುಂಬೈಗೆ ಹಾಕೇ ಹೋದರು ಎಂದು ಪ್ರಶ್ನಿಸಿದರು.

ತಾವು ಬಿಜೆಪಿ ಬಿಟ್ಟು ಜೆಡಿಎಸ್ ಸೇರ್ಪಡೆಯಾದ ಬಗ್ಗೆ ವಿವರಿಸಿದ ಅವರು , ನನಗೆ ಶಾಸಕನಾಗಬೇಕಿತ್ತು  ಹೀಗಾಗಿ ಬಿಜೆಪಿ ಬಿಟ್ಟು  ಜೆಡಿಎಸ್ ಗೆ ಬಂದೆ. ಬಿಜೆಪಿಗೆ ನಾನು ಅನ್ಯಾಯಮಾಡಿಲ್ಲ. ನನಗೆ ಬಿಜೆಪಿ ಅನ್ಯಾಯ ಮಾಡಿಲ್ಲ ಎಂದರು.

Key words: resignation-H viswhwanath-minister-sara mahesh