ಹಿಂದುಳಿದ ಸಮುದಾಯಕ್ಕೆ ಮೀಸಲಾತಿ ಅತ್ಯಗತ್ಯ : ನ್ಯಾ. ನಾಗಮೋಹನ್ ದಾಸ್.

kannada t-shirts

ಬೆಂಗಳೂರು, ಡಿಸೆಂಬರ್,12,2022(www.justkannada.in): ಸರ್ಕಾರ  ದೇಶದ ಪ್ರತಿಯೊಂದು ಸಮುದಾಯದ ಜನರಿಗೂ ಮೀಸಲಾತಿ ಕಲ್ಪಿಸಿದೆ . ಆದರೆ ಮಾಹಿತಿ ಕೊರತೆಯಿಂದಾಗಿ ಹೆಚ್ಚಿನ ಜನರಿಗೆ ಅದರ ಬಗ್ಗೆ ಅರಿವಿಲ್ಲ, ಹಿಂದುಳಿದ ವರ್ಗದವರಿಗೆ ಮೀಸಲಾತಿ ಅತ್ಯಗತ್ಯ ಎಂದು ಹೈಕೋರ್ಟ್ ನ ನಿವೃತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.

ಜಯನಗರ ನ್ಯಾಷನಲ್ ಕಾಲೇಜಿನ ‘ಕನ್ನಡ ವಿಭಾಗ ಮತ್ತು ಜನ ಮಾಧ್ಯಮ’ ಸಹಯೋಗದಲ್ಲಿ ನಡೆದ ‘ಸಂವಿಧಾನ, ಪ್ರಜಾಪ್ರಭುತ್ವ, ಮೀಸಲಾತಿ’  ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಡನೆ ನಡೆದ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಂವಿಧಾನ ಮತ್ತು ಮೀಸಲಾತಿ ಕುರಿತು ವಿದ್ಯಾರ್ಥಿಗಳು ಕೇಳಿದ  ಅನೇಕ ಪ್ರಶ್ನೆಗಳಿಗೆ ಅವರು ಈ ಸಂದರ್ಭದಲ್ಲಿ ಉತ್ತರಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ  ಪ್ರಾಧ್ಯಾಪಕರಾದ ಪ್ರೊ.ಕಿಗ್ಗ ರಾಜಶೇಖರ್, ನಾವೆಲ್ಲರೂ ಸಮಾನತೆಯಿಂದ ಶಿಕ್ಷಣ ಪಡೆದು, ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಸಂವಿಧಾನವೇ ಕಾರಣ ಎಂದರು.

ಜನಪರ ಹೋರಾಟಗಾರರಾದ ಮಾವಳ್ಳಿ ಶಂಕರ್, ಪ್ರಸ್ತುತ ಸಂದರ್ಭದಲ್ಲಿ ಸಂವಿಧಾನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಜನ ಮಾಧ್ಯಮ ಸಂಸ್ಥಾಪಕರಾದ ಬಿ.ರಾಜಶೇಖರ ಮೂರ್ತಿ ಮೀಸಲಾತಿ ಕುರಿತು ವಿವರಣೆ ನೀಡಿದರು.

ಕಾರ್ಯಕ್ರಮದಲ್ಲಿ ಎನ್.ಇ. ಎಸ್.ಕಾರ್ಯದರ್ಶಿಗಳಾದ ಪ್ರೊ.ಎಸ್.ಎನ್.ನಾಗರಾಜ ರೆಡ್ಡಿ, ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ.ಸಿ.ಕಮಲ, ಉಪಪ್ರಾಂಶುಪಾಲರಾದ ಹೆಚ್.ಸಿ.ಬೆಲ್ಲದ್, ಪಿಯುಸಿ ಪ್ರಾಂಶುಪಾಲರಾದ ಪ್ರೊ. ಸಿ.ಆರ್. ಸಂಪತ್ ಕುಮಾರಿ, ಕನ್ನಡ ವಿಭಾಗದ  ಮುಖ್ಯಸ್ಥರಾದ  ಡಾ.ಪಾಪಣ್ಣ, ಡಾ.ರಾಜಣ್ಣ,  ಡಾ. ಸವಿತಾ, ಪ್ರೊ. ಮುಗಳೀಶ್ವರ, ಅಧ್ಯಾಪಕ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Key words: Reservation – essential – backward community-justice- Nagmohan Das

ENGLISH SUMMARY…

Reservation required for backward classes: Justice Nagamohan Das
Jayanagara, December 12, 2022 (www.justkannada.in): “The Government has provided reservation for all community people in the country. However, due to lack of awareness many people are not aware of it. Reservation is required for the backward classes,” opined Justice H.N. Nagamohan Das.
He participated in an interaction program on the topic, “Constitution, Democracy, Reservation,” held at the Jayanagara National College, organized by the Kannada Department and Jana Madhyama today.
He replied to several questions asked by the students on reservation and constitution. Prof. Kigga Rajashekar expressed his view that it is our Constitution which has allowed all of us of us to get education and live in this society.
Activist Mavalli Shankar explained the students about the importance and significance of the Constitution. Jana Madhyama founder B. Rajashekarmurthy explained about reservation.
N.E.S. Seretary Prof. S.N. Nagaraj Reddy, Principal Dr. Y.C. Kamala, Deputy Principal H.C. Bellad, PUC Principal Prof C.R. Sampath Kumari, Kannada Department Head Dr. Pappanna, Dr. Rajanna, Dr. Savitha, Prof. Mugleeshwara, teaching staff and students were present.
Keywords: National College/ Justice Nagamohan Das/ Reservation

website developers in mysore