ಲಾಕ್ ಡೌನ್ ಟೈಂನಲ್ಲಿ ‘ಶೆಣೈ ಆರ್ಟ್ ಫೌಂಡೇಶನ್’ನಿಂದ ಯುವ ಕಲಾವಿದರಿಗೆ ‘ಪುನಶ್ಚೇತನ’

ಮೈಸೂರು, ಜೂನ್ 21, 2020 (www.justkannada.in): ಕೊರೊನಾ ಸೋಂಕಿನ ಕಾರಣದಿಂದ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿ ಕೋಟ್ಯಾಂತರ ಮಂದಿ ಸಂಕಷ್ಟ ಅನುಭವಿಸಿದ್ದಾರೆ. ಇದರಲ್ಲಿ ಸಾವಿರಾರು ಚಿತ್ರ ಕಲಾವಿದರೂ ಕೂಡ ಸೇರಿದ್ದಾರೆ.

ಲಾಕ್ ಡೌನ್ ವಿನಾಯಿತಿ ಘೋಷಿಸಿದ್ದರೂ ಕಲಾವಿದರ ಪರಿಸ್ಥಿತಿ ಏನು ಬದಲಾಗಿಲ್ಲ. ಹೀಗಾಗಿ ಕಲಾವಿದರಿಗೆ ಆನ್ ಲೈನ್ ನಲ್ಲಿ ವೇದಿಕೆ ಒದಗಿಸಿ ‘ಶೆಣೈ ಆರ್ಟ್ ಫೌಂಡೇಶನ್’ ನೆರವಾಗುತ್ತಿದೆ.

ಹೌದು. ಕೊರೊನಾ ಸಮಯದಲ್ಲಿ ಯುವ ಚಿತ್ರ ಕಲಾವಿದರು ಕೂಡ ಬಹಳ ತತ್ತರಿಸಿ ಹೋಗಿದ್ದಾರೆ. ಈ ನಡುವೆ ಕೆಲ ಕಲಾವಿದರಿಗೆ ‘ಶೆಣೈ ಆರ್ಟ್ ಫೌಂಡೇಶನ್’ ನೆರವಾಗುತ್ತಿದೆ.

16 ಮಂದಿ ಯುವಕಲಾವಿದರಿಗೆ ಕಲಾ ಸಾಮಗ್ರಿ ಕೊಳ್ಳಲು ‘ಶೆಣೈ ಆರ್ಟ್ ಫೌಂಡೇಶನ್’ ಧನಸಹಾಯ ಮಾಡಿದೆ. ನಂತರ ಆವರ ಕಲಾಕೃತಿಗಳ ಆನ್ ಲೈನ್ ನಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೂ ವ್ಯವಸ್ಥೆ ಮಾಡುತ್ತಿದೆ. ಈ ಮೂಲಕ ನವ ಪ್ರತಿಭೆಗಳಿಗೆ ಹೊಸ ಅವಕಾಶವನ್ನು’ಶೆಣೈ ಆರ್ಟ್ ಫೌಂಡೇಶನ್’ಕಲ್ಪಿಸುತ್ತಿದೆ.