‍ಪ್ರಶಾಂತ್ ನೀಲ್-ಜೂನಿಯರ್ ಎನ್ ಟಿಆರ್ ಸಿನಿಮಾಗೆ ಟೈಟಲ್ ರೆಡಿ!

ಬೆಂಗಳೂರು, ಜೂನ್ 16, 2020 (www.justkannada.in): ಕೆಜಿಎಫ್ ಡೈರೆಕ್ಟರ್ ‍ಪ್ರಶಾಂತ್ ನೀಲ್ ಜೂನಿಯರ್ ಎನ್ ಟಿಆರ್ ಗೆ ಸಿನಿಮಾ ಡೈರೆಕ್ಟ್ ಮಾಡುವ ಸುದ್ದಿಗೆ ಸಾಕಷ್ಟು ಬಲ ಬಂದಿದೆ.

ಮೈತ್ರಿ ಮೂವಿ ಮೇಕರ್ಸ್​ ಬ್ಯಾನರ್​ನಲ್ಲಿ, ನೀಲ್​ ಮತ್ತು ಎನ್​ಟಿಆರ್ ಚಿತ್ರಕ್ಕೆ ಟೈಟಲ್​ ಕೂಡ ರಿಜಿಸ್ಟರ್ ಮಾಡಿದ್ದಾಗಿದೆ ಎಂಬ ಸುದ್ದಿ ಸಾಕಷ್ಟು ಸದ್ದು ಮಾಡುತ್ತಿದೆ.

ಇದಕ್ಕಾಗಿ ಎರಡು ಟೈಟಲ್​ಗಳನ್ನ ರಿಜಿಸ್ಟರ್ ಮಾಡಿದ್ದು, ಎರಡಲ್ಲಿ ಒಂದು ಫೈನಲ್​ ಆಗಲಿದ್ಯಂತೆ. ಅಂದ್ಹಾಗೇ ಈ ಟೈಟಲ್​ಗಳು ಕೂಡ ಪಕ್ಕಾ ಮಾಸ್​ ಟೈಟಲ್​ಗಳಾಗಿದೆ. ಮೊದಲ ಟೈಟಲ್​ ನ್ಯೂಕ್ಲಿಯರ್ ಅಂತ್ಲೂ, ಎರಡನೇ ಟೈಟಲ್​ ಮಿಸೈಲ್​ ಅಂತ್ಲೂ ರಿಜಿಸ್ಟರ್ ಆಗಿದೆ.

ಅಂದಹಾಗೆ ಟಾಲಿವುಡ್​ ಯಂಗ್​ ಟೈಗರ್​ ಹುಟ್ಟುಹಬ್ಬಕ್ಕೆ ಪ್ರಶಾಂತ್​ ನೀಲ್​ ಬಹಳ ವಿಶೇಷವಾಗಿ ಶುಭಾಶಯ ತಿಳಿಸಿದ್ದರು ಆಗಲೇ ಇವರಿಬ್ಬರು ಸೇರಿ ಸಿನಿಮಾ ಮಾಡುವ ಸುದ್ದಿಗೆ ಸಾಕಷ್ಟು ಪುಷ್ಟಿಬಂದಿತ್ತು.