ಲಂಕಾ-ಟೀಂ ಇಂಡಿಯಾ ಅಂತಿಮ ಟಿ-20 ಕದನ ಇಂದು

Promotion

ಪುಣೆ, ಜನವರಿ 10, 2019 (www.justkannada.in): ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಗೆದ್ದ ಭಾರತ ಇಂದು ಶ್ರೀಲಂಕಾ ವಿರುದ್ಧ ಕೊನೆಯ ಹಣಾಹಣಿ ನಡೆಸಲಿದೆ.

ಈ ಪಂದ್ಯವನ್ನು ಗೆದ್ದು ಸರಣಿ ತನ್ನದಾಗಿಸಿಕೊಳ್ಳುವ ಭರವಸೆಯಲ್ಲಿ ಭಾರತವಿದ್ದರೆ, ಗೆದ್ದು ಸಮಬಲ ಸಾಧಿಸುವ ಗುರಿಯನ್ನು ಲಂಕಾ ಹೊಂದಿದೆ.

ಇಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಪಂದ್ಯದಲ್ಲಿ ಯಾರು ಜಯಗಳಿಸುತ್ತಾರೆ ಕಾದು ನೋಡಬೇಕು.