ದೊಡ್ಡ ಕಛೇರಿ ಎಂದು ರಿಲ್ಯಾಕ್ಸ್ ಮಾಡುತ್ತಾ ಕೂರಬೇಡಿ – ಮೈಸೂರು ಪೊಲೀಸ್ ಕಮಿಷನರ್ ಗೆ ಗೃಹಸಚಿವ ಬಸವರಾಜ ಬೊಮ್ಮಾಯಿ ಕಿವಿಮಾತು

ಮೈಸೂರು,ನವೆಂಬರ್,24,2020(www.justkannada.in): ದೊಡ್ಡ ಕಛೇರಿ ಎಂದು ರಿಲ್ಯಾಕ್ಸ್ ಮಾಡುತ್ತಾ ಕಚೇರಿಯಲ್ಲಿಯೇ ಕೂರಬೇಡಿ  ನಿಮ್ಮ ಅವಶ್ಯಕತೆ ಮೈಸೂರು ನಗರಕ್ಕೆ ಹೆಚ್ಚಿದೆ. ಹೀಗೆ ಮೈಸೂರು ಪೊಲೀಸ್ ಕಮಿಷನರ್ ಚಂದ್ರಗುಪ್ತರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಿವಿಮಾತು ಹೇಳಿದರು.

ಮೈಸೂರು ನಗರದ ನೂತನ ಪೊಲೀಸ್ ಕಮಿಷನರ್ ಕಚೇರಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಟೇಪ್ ಕತ್ತರಿಸುವ ಮೂಲಕ ಇಂದು ಲೋಕಾರ್ಪಣೆ ಮಾಡಿದರು. ನಜರಬಾದ್ ನಲ್ಲಿ ನಿರ್ಮಾಣಗೊಂಡಿರುವ ಈ ನೂತನ ಪೊಲೀಸ್ ಕಮಿಷನರ್ ಕಚೇರಿಗೆ 19.36 ಕೋಟಿ ರೂ. ವೆಚ್ಚ ತಗುಲಿದೆ. ಕಮಿಷನರ್ ಕಟ್ಟಡದ ಜೊತೆ 108 ವಸತಿ ಗೃಹಗಳ ಉದ್ಘಾಟನೆ ಸಹ ನೆರವೇರಿಸಲಾಯಿತು.I didn't knew CM BSY will think so cheaply - KPCC President D.K. Shivakumar

ಸಮಾರಂಭದಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮೈಸೂರು ನಗರ ಕಮಿಷನರ್ ಕಚೇರಿ ಕಟ್ಟಡ ಭವ್ಯವಾಗಿದೆ. ಈ ರೀತಿಯಾದ ಕಟ್ಟಡ ಪೊಲೀಸ್ ಇಲಾಖೆಗೆ ರಾಜ್ಯದಲ್ಲೆಲ್ಲಿಯೂ ಇಲ್ಲ. ದೊಡ್ಡ ಕಛೇರಿ ಎಂದು ರಿಲ್ಯಾಕ್ಸ್ ಮಾಡುತ್ತಾ ಕಚೇರಿಯಲ್ಲಿಯೇ ಕೂರಬೇಡಿ. ನಿಮ್ಮ ಅವಶ್ಯಕತೆ ಮೈಸೂರು ನಗರಕ್ಕೆ ಹೆಚ್ಚಿದೆ ಎಂದು ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತರಿಗೆ ಕಿವಿಮಾತು ಹೇಳಿದರು.relax-mysore-home-minister-basavaraja-bommai-mysore-police-commissioner

ಕರ್ನಾಟಕದಲ್ಲಿ ಅಪರಾಧ ಪ್ರಕರಣಗಳು ಕಡಿಮೆ ಆಗಿವೆ. ರಾಜ್ಯ ಸರ್ಕಾರ ಡ್ರಗ್ಸ್ ವಿರುದ್ಧ ಸಮರವನ್ನೇ ಸಾರಿದ್ದೇವೆ. ತಂತ್ರಜ್ಞಾನ ಬೆಳದಂತೆ ಸೈಬರ್ ಕ್ರೈಂ ಕೂಡ ಹೆಚ್ಚಾಗುತ್ತಿವೆ. ದೇಶದಲ್ಲೇ ಕರ್ನಾಟಕ ಪೊಲೀಸ್ ದಕ್ಷತೆಗೆ ಹೆಸರುವಾಸಿಯಾಗಿದೆ. ಪೊಲೀಸ್ ಇಲಾಖೆಯಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಿ ಇಲಾಖೆಗೆ ಅಗತ್ಯ ಸೌಲಭ್ಯಗಳನ್ನು ನೀಡಲಾಗುವುದು ಎಂದು ಗೃಹ ಸಚಿವ ಬೊಮ್ಮಾಯಿ  ತಿಳಿಸಿದರು.

Key words: Relax –mysore-Home Minister -Basavaraja Bommai – Mysore -police commissioner