ನಿವೃತ್ತ ಯೋಧರನ್ನ ಲೋಕಾಯುಕ್ತಕ್ಕೆ ನೇಮಿಸಿಕೊಳ್ಳುವ ಚಿಂತನೆ ಇದೆ-ಉಪ ಲೋಕಾಯುಕ್ತ ನ್ಯಾ.ಕೆ.ಎನ್ ಫಣೀಂದ್ರ.

ಚಿಕ್ಕಬಳ್ಳಾಪುರ,ನವೆಂಬರ್,5,2022(www.justkannada.in): ನಿವೃತ್ತ ಯೋಧರನ್ನ ಲೋಕಾಯುಕ್ತಕ್ಕೆ ನೇಮಿಸಿಕೊಳ್ಳುವ ಚಿಂತನೆ ಇದೆ ಎಂದು ಉಪ ಲೋಕಾಯುಕ್ತ ನ್ಯಾ.ಕೆ.ಎನ್ ಫಣೀಂದ್ರ ತಿಳಿಸಿದರು.

ಚಿಕ್ಕಬಳ್ಳಾಪುರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎನ್ ಫಣೀಂದ್ರ, ಲೋಕಾಯುಕ್ತಕ್ಕೆ ಪ್ರಾಮಾಣಿಕ ನಿವೃತ್ತ ಅಧಿಕಾರಿಗಳನ್ನ ನೇಮಿಸಿಕೊಳ್ಳುವ ಯೋಚನೆ ಇದೆ.  ಲೋಕಾಯುಕ್ತರು ಇಂತಹ ಪ್ರಸ್ತಾವನೆ ಬಗ್ಗೆ ಯೋಚನೆ ಮಾಡಿದ್ದಾರೆ. ಸರ್ಕರದ ಅನುಮತಿ ಪಡೆದು ನೇಮಿಸಿಕೊಳ್ಳಬೇಕೆಂದು ಚಿಂತನೆ ಮಾಡಲಾಗಿದೆ.  ನಮ್ಮ ಸಂಸ್ಥೆ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಪ್ರಾಮಣಿಕ ಪ್ರಯತ್ನ, ಮಾಡಲಾಗುತ್ತದೆ ಎಂದರು.

ನಮ್ಮ ಸಂಸ್ಥೆಗೆ ನೇಮಕವಾಗುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಜಿಲ್ಲಾ ಮಟ್ಟ ಅಧಿಕಾರಿಗಳು ಹಾಗೂ ಲೋಕಾಯುಕ್ತ ಪೊಲೀಸರ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಜಿಲ್ಲಾ ಮಟ್ಟದಲ್ಲೇ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುತ್ತಿದೆ. ಸಂಸ್ಥೆಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು, ಅಗತ್ಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಪ್ರಸ್ತುತ ಸರ್ಕಾರ ಒದಗಿಸುತ್ತಿದೆ. ಒಟ್ಟಾರೆಯಾಗಿ ಸಂಸ್ಥೆಯನ್ನು ಇನ್ನಷ್ಟು ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Key words: recruit- retired soldiers – Lokayukta-Deputy Lokayukta -.K.N Phanindra