ಡಿ ಬಾಸ್ ಬಾಕ್ಸ್ ಆಫೀಸ್ ಸುಲ್ತಾನ್ ಅನ್ನೋದು ಮತ್ತೆ ಪ್ರೂವ್ !

ಬೆಂಗಳೂರು, ಮಾರ್ಚ್ 12, 2021 (www.justkannada.in):

ಡಿ ಬಾಸ್ ದರ್ಶನ್ ‘ರಾಬರ್ಟ್’ ಸಿನಿಮಾ ಮೊದಲ ದಿನವೇ ದಾಖಲೆ ಕಲೆಕ್ಷನ್ ಕಂಡಿದೆ.

ವಿಶೇಷ ಎಂದರೆ ಡಿ ಬಾಸ್ ಎಂಟ್ರಿ ಕಂಡು ಅವರ ಅಭಿಮಾನಿಗಳು ಮಾತ್ರವಲ್ಲ ಬೇರೆ ನಟರ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲೂ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಬಿಡುಗೆಯಾಗಿರುವ ರಾಬರ್ಟ್ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮೊದಲ ದಿನದ ಕಲೆಕ್ಷನ್ ರಿಪೋರ್ಟ್ ಪ್ರಕಾರ ರಾಬರ್ಟ್ ಸಿನಿಮಾ ಕರ್ನಾಟಕದಲ್ಲಿ 17.24 ಕೋಟಿ ರೂ ಕಲೆಕ್ಷನ್ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.

ಕನ್ನಡದ ಸಿನಿಮಾ ಮೊದಲ ದಿನ ಇಷ್ಟು ದೊಡ್ಡ ಮೊತ್ತದ ಕಲೆಕ್ಷನ್ ಮಾಡಿರುವುದು ಸ್ಯಾಂಡಲ್ ವುಡ್‌ಗೆ ಹೆಮ್ಮೆಯ ವಿಚಾರವಾಗಿದೆ.