ಶಾಲಾ, ಪಿಯು ಕಾಲೇಜುಗಳ ಪುನಾರಂಭ ವಿಚಾರ: ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ….

ಬೆಂಗಳೂರು,ನವೆಂಬರ್,23,2020(www.justkannada.in):  ಕೊರೋನಾ ಸಂಕಷ್ಟದ ನಡುವೆ ಶಾಲೆ ಮತ್ತು ಪಿಯು ಕಾಲೇಜುಗಳ ಪುನಾರಂಭ ಮಾಡುವ ಕುರಿತು ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು  ಶಾಲಾ, ಪಿಯು ಕಾಲೇಜುಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.kannada-journalist-media-fourth-estate-under-loss

ಶಾಲೆ ಪುನರಾರಂಭ ಕುರಿತು ಇಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಿಎಂ ಮಹತ್ವದ ಸಭೆ ನಡೆಯಲಿದೆ. ಇನ್ನು ಈಗಾಗಲೇ ಶಾಲೆಗಳ ಆರಂಭ ಕುರಿತು ಶಿಕ್ಷಣ ಇಲಾಖೆ ವರದಿ ನೀಡಿದ್ದು, ವರದಿಯಲ್ಲಿ ಡಿಸೆಂಬರ್ ಮೊದಲನೇ ವಾರದಲ್ಲಿ ಶಾಲೆಗಳನ್ನು ಆರಂಭಿಸಬಹುದೆಂದು ಶಿಫಾರಸು ಮಾಡಲಾಗಿದೆ.

ಹೀಗಾಗಿ ವರದಿ ಸಾಧಕ ಬಾಧಕ ಚರ್ಚಿಸಿ ಶಾಲೆಗಳ ಆರಂಭದ ಕುರಿತು ಮುಂದಿನ ನಿರ್ಧಾರ ತೆಗೆದುಕೊಳ್ಳುಲು ಇಂದು ಸಭೆ ಕರೆಯಲಾಗಿದೆ. ಆಯುಕ್ತರ ವರದಿ, ವಿವಿಧ ಇಲಾಖೆಗಳ ಅಭಿಪ್ರಾಯಗಳ ಪರಾಮರ್ಶಿಸಿ ಸಿಎಂ ಶಾಲೆ, ಕಾಲೇಜಗಳ ಆರಂಭದ ಬಗ್ಗೆ  ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

English summary…

Reopening of schools and PU colleges: Meeting with CM today
Bengaluru, Nov. 23, 2020 (www.justkannada.in): A meeting regarding reopening of schools and PU Colleges will be held today under the leadership of Chief Minister B.S. Yedyurappa, with Education Minister S. Suresh Kumar, Commissioner Anbukumar and officers of various departments. Re-opening - school – PU- colleges-Today - important meeting - CM.
The Education department has already submitted a report to the government recommending reopening of schools and PU College from first week of December. A decision is expected to be taken in this regard today.
Keywords: school-PU college reopening-CM meeting-education department

Key words: Re-opening – school – PU- colleges-Today – important meeting – CM.