ಭೂಗತ ಪಾತಕಿ ರವಿ ಪೂಜಾರಿ ಬಂಧನ ಹಿನ್ನೆಲೆ: ಮೈಸೂರು ಭಾಗದ ಇಬ್ಬರು ಶಾಸಕರ ಪ್ರಕರಣದ ಬಗ್ಗೆ ತನಿಖೆ ಸಾಧ್ಯತೆ….

ಮೈಸೂರು,ಫೆ,24,2020(www.justkannada.in): ಭೂಗತ ಜಗತ್ತಿನ ಪಾತಕಿ ರವಿ ಪೂಜಾರಿ ಬಂಧನ ಹಿನ್ನೆಲೆ. ಮೈಸೂರು ಭಾಗದ ಇಬ್ಬರು ಶಾಸಕರ ಪ್ರಕರಣದ ಬಗ್ಗೆ ತನಿಖೆ ಕೈಗೆತ್ತಿಕೊಳ್ಳುವ  ಸಾಧ್ಯತೆ ಇದೆ.

ಮೈಸೂರಿನ ಎನ್.ಆರ್  ಕ್ಷೇತ್ರದ ಶಾಸಕ  ತನ್ವಿರ್ ಸೇಠ್ ಹಾಗೂ ಕೆ.ಆರ್ ನಗರ ಕ್ಷೇತ್ರದ ಶಾಸಕ ಸಾ.ರಾ ಮಹೇಶ್ ಗೆ ಭೂಗತ ಪಾತಕಿ ರವಿ ಪೂಜಾರಿ ಬೆದರಿಕೆ ಕರೆ ಮಾಡಿದ್ದನು.  ಈ ಹಿಂದೆ 10ಕೋಟಿ ರೂ ನೀಡುವಂತೆ ಬೆದರಿಕೆ ಕರೆಗಳು ಹಾಗೂ ಎಸ್. ಎಂ.ಎಸ್ ಬಂದಿತ್ತು ಎಂದು ಶಾಸಕ ತನ್ವಿರ್ ಸೇಠ್ ಹೇಳಿದ್ದರು.  ಈ ಬಗ್ಗೆ  ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವರಾಗಿದ್ದ ರಾಮಲಿಂಗಾರೆಡ್ಡಿ, ಮತ್ತು ಡಿಜಿ ಹಾಗೂ ಐಜಿಪಿ ನೀಲಮಣಿ ರಾಜು ಅವರಿಗೆ ಶಾಸಕ ತನ್ವೀರ್ ಸೇಠ್  ದೂರು ನೀಡಿದ್ದರು.

ಇನ್ನು 2018ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ವಿರುದ್ಧ ಎಚ್ಚರಿಕೆ ನೀಡಿದ್ದರ ಬಗ್ಗೆ ರವಿ ಪೂಜಾರಿ ವಿರುದ್ದ ಲಕ್ಷ್ಮಿ ಪುರಂ ಪೊಲೀಸ್ ಠಾಣೆಯಲ್ಲಿ ಶಾಸಕ ಸಾ.ರಾ ಮಹೇಶ್ ದೂರು ದಾಖಲಿಸಿದ್ದರು. ಹೀಗಾಗಿ ಇಬ್ಬರು ಶಾಸಕರ ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳುವ ಸಾಧ್ಯತೆ ಇದೆ.

ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ರವಿ ಪೂಜಾರಿಯನ್ನ ನಿನ್ನೆ ದಕ್ಷಿಣ ಆಫ್ರಿಕಾದಲ್ಲಿ ಬಂಧಿನವಾಗಿತ್ತು. ರವಿ ಪೂಜಾರಿ ಬಂಧನದಿಂದ ಮೈಸೂರು ಭಾಗದ  ಇಬ್ಬರು ಶಾಸಕರು ನಿರಾಳರಾಗಿದ್ದಾರೆ.

Key words: Ravi Poojary- arrest -case – two- Mysore- MLA- investigate