ವೃತ್ತಿ ಜೀವನದಲ್ಲಿ ಬ್ರೇಕ್ ನೀಡಿದ ಸಿನಿಮಾ ಫೋಟೋ ಹಂಚಿಕೊಂಡ ರಶ್ಮಿಕಾ

ಬೆಂಗಳೂರು, ಆಗಸ್ಟ್ 16, 2021 (www.justkannada.in): ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಎಲ್ಲರ ಗಮನ ಸೆಳೆದಿದೆ.

ಗೀತಾ ಗೋವಿಂದಂ ಸಿನಿಮಾ ಬಿಡುಗಡೆ ಇಂದಿಗೆ ಮೂರು ವರ್ಷವಾಗಿದೆ. ಈ ಕುರಿತ ಫೋಟೋವೊಂದನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ.

ಅಂದಹಾಗೆ ರಶ್ಮಿಕಾಗೆ ಬ್ರೇಕ್ ನೀಡಿದ್ದು  ಗೀತಾ ಗೋವಿಂದಂ. ಈ ಸಿನಿಮಾದಿಂದಲೇ ಕೊಡಗಿನ ಬೆಡಗಿ ಬಾಲಿವುಡ್ ಮಟ್ಟಕ್ಕೂ ಬೆಳೆಯಲು ಸಾಧ್ಯವಾಗಿತ್ತು.

ವಿಜಯ್ ದೇವರಕೊಂಡ ಜೊತೆಗಿನ ಫೋಟೋ ಹಂಚಿಕೊಂಡಿರುವ ರಶ್ಮಿಕಾ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.