ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಸಂಕ್ರಾಂತಿ ಆಚರಣೆ!?

ಬೆಂಗಳೂರು, 17, 01, 2021 (www.justkannada.in): ವಿಜಯ್​ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಸಂಕ್ರಾಂತಿ ಆಚರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ವಿಜಯ್ ದೇವರಕೊಂಡ ಸಂಕ್ರಾಂತಿ ಹಬ್ಬದಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ವೊಂದನ್ನು ಮಾಡಿದ್ದಾರೆ.

ವಿಶೇಷ ಎಂದರೆ  ಇಂತಹದ್ದೇ ಬ್ಯಾಕ್​ಗ್ರೌಂಡ್​ನಲ್ಲಿರುವ ಫೋಟೋವನ್ನು ರಶ್ಮಿಕಾ ಮಂದಣ್ಣ ಕೂಡ ಶೇರ್​ ಮಾಡಿದ್ದಾರೆ.

ಹೀಗಾಗಿ ವಿಜಯ್​ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಸಂಕ್ರಾಂತಿ ಆಚರಿಸಿದ್ದಾರೆಂದು ಪಿಸುಪಿಸು ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಂದೇ ಬಣ್ಣದ ಉಡುಪುಗಳನ್ನು ಧರಿಸಿದ್ದಾರೆ. ಹೀಗಾಗಿ ಇಬ್ಬರೂ ಒಂದೇ ಕಡೆ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ ಎನ್ನಲಾಗುತ್ತಿದೆ.