ಟ್ರೋಲ್’ಗೆ ಡೋಂಟ್ ಕೇರ್ ಎಂದ ರಶ್ಮಿಕಾ

ಬೆಂಗಳೂರು, ನವೆಂಬರ್ 03, 2020 (www.justkannada.in): ಟ್ರೋಲಿಗರು ಹಾಗೂ ಟ್ರೋಲ್ ಪೇಜ್ ಗಳ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ.

ನನಗನಿಸಿದ್ದನ್ನು ನಾನು ನೇರವಾಗಿ ಹಂಚಿಕೊಳ್ಳುತ್ತೇನೆ. ಯಾವುದಕ್ಕೂ ಕೇರ್ ಮಾಡಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ರಶ್ಮಿಕಾ ಸುದೀರ್ಘವಾಗಿ ಬರೆದಿದ್ದಾರೆ.

ನನ್ನನ್ನು ಸಾಕಷ್ಟು ಟ್ರೋಲ್ ಮಾಡಲಾಗುತ್ತದೆ. ಆದರೆ ಅದಕ್ಕೆಲ್ಲಾ ಕೇರ್ ಮಾಡಲ್ಲ. ನನ್ನ ಲುಕ್ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಈ ಟ್ರೋಲ್ ಗಳಿಗೆಲ್ಲಾ ನಾನು ಹೆದರೋಳಲ್ಲ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.