ಪಶುವೈದ್ಯೆ ಮೇಲೆ ಅತ್ಯಾಚಾರ ಆರೋಪಿಗಳ ಎನ್ ಕೌಂಟರ್ ಪ್ರಕರಣ: ಪೊಲೀಸರ ವಿರುದ್ದ ಎಫ್ ಐಆರ್ ದಾಖಲಿಸುವಂತೆ ಸುಪ್ರೀಂಕೋರ್ಟ್ ಗೆ ಅರ್ಜಿ…

ನವದೆಹಲಿ, ಡಿ.7,2019(www.justkannada.in): ಹೈದರಾಬಾದ್ ನಲ್ಲಿ ಪಶುವೈದ್ಯೆ ದಿಶಾ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನ ಎನ್ ಕೌಂಟರ್ ಮಾಡಿದ ಪೊಲೀಸರ ಕಾರ್ಯಕ್ಕೆ ದೇಶದಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಬಗ್ಗೆ ಕೆಲವು ಟೀಕೆಗಳು ಕೇಳಿ ಬಂದಿದ್ದು,  ಎನ್ ಕೌಂಟರ್ ಮಾಡಿದ್ದ ಪೊಲೀಸರ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಸುಪ್ರೀಂ ಕೋರ್ಟ್ ಗೆ ಇಂದು ಇಬ್ಬರು ವಕೀಲರು ಅರ್ಜಿ ಸಲ್ಲಿಸಿದ್ದಾರೆ.

ಜಿ.ಎಸ್ ಮಣಿ ಮತ್ತು ಪ್ರದೀಪ್ ಕುಮಾರ್  ಎಂಬ ವಕೀಲರು ಪೊಲೀಸರ ವಿರುದ್ದ ಎಫ್ ಐಆರ್ ದಾಖಲಿಸುವಂತೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನು  ನಾಲ್ವರು ಅತ್ಯಾಚಾರಿಗಳನ್ನ ಎನ್ ಕೌಂಟರ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು ತನಿಖೆಗಾಗಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ

ಇವೆಲ್ಲದರ ಮಧ್ಯೆ ಆರೋಪಿಗಳ ಎನ್ ಕೌಂಟರ್ ನಡೆದಿರುವ ಸ್ಥಳದಲ್ಲಿ ದೇಹದಿಂದ ಹೊರಬಂದಿರುವ ಬುಲೆಟ್ ಗಳಿಗಾಗಿ ಇಂದು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

Key words: rape accused- encounter- case – FIR -against – police- lawyer-Supreme Court