ಬಿಗ್ ಬಜೆಟ್’ನಲ್ಲಿ ರಂಗಿತರಂಗ ಹಿಂದಿಗೆ ಡಬ್ ಆಗಲು ಸಿದ್ಧತೆ !

Promotion

ಬೆಂಗಳೂರು, ಜುಲೈ 05, 2022 (www.justkannada.in): ನಿರ್ದೇಶಕ ಅನುಪ್ ಭಂಡಾರಿ ಅವರ ಚೊಚ್ಚಲ ಚಿತ್ರ ರಂಗಿತರಂಗ ಹಿಂದಿಗೆ ಡಬ್ ಆಗುತ್ತಿದೆ.

ದೊಡ್ಡ ನಿರ್ಮಾಪಕರೊಬ್ಬರು ರಂಗಿತರಂಗವನ್ನು ಹಿಂದಿಯಲ್ಲಿ ಹೊರತರಲು ಉತ್ಸುಕರಾಗಿದ್ದಾರೆ. ಮುಂಬೈನ ಕಾರ್ಪೊರೇಟ್ ಸ್ಟುಡಿಯೋಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ನಿರ್ಮಾಪಕರು ಹಿಂದಿ ರೀಮೇಕ್ ರಂಗಿತರಂಗ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಮಾಡಲು ಬಯಸುತ್ತಿದ್ದು, ಪ್ರಮುಖ ಪಾತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಶಾಹಿದ್ ಕಪೂರ್ ರನ್ನು ಕರೆತರಲು ಯೋಜಿಸಿದ್ದಾರೆ ಎನ್ನುತ್ತಿವೆ ಮೂಲಗಳು.

ಅಂದಹಾಗೆ ಅನುಪ್ ಭಂಡಾರಿ ಅವರ ಚೊಚ್ಚಲ ಚಿತ್ರ ರಂಗಿತರಂಗ ಜುಲೈ 3 ರಂದು ಏಳನೇ ವರ್ಷಕ್ಕೆ ಕಾಲಿಡುತ್ತಿದೆ.

ಚಿತ್ರದಲ್ಲಿ ನಿರೂಪ್ ಭಂಡಾರಿ ಮತ್ತು ಆವಂತಿಕಾ ಶೆಟ್ಟಿ ರಾಧಿಕಾ ನಾರಾಯಣ್ ಮತ್ತು ಸಾಯಿ ಕುಮಾರ್ ಪ್ರಮುಖ ಪಾತ್ರ ನಿರ್ವಹಿಸಿದ್ದರು.